ರಾಜ್ಯದಲ್ಲಿ ಮಾತ್ರವೇ ಅಲ್ಲದೇ ಇಡೀ ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆ ಹಂತಹಂತವಾಗಿ ಆರಂಭ ಆಗಿದೆ. ಆದರೆ ಶಾಲಾ ಕಾಲೇಜುಗಳ ಬಂದ್ ಆಗಿ ಐದು ತಿಂಗಳು ಕಳೆದಿದ್ದು, ಪುನರಾರಂಭ ಯಾವಾಗ?ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಆದರೆ ಮೊನ್ನೆಯಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಬಂದಿದ್ದು, ಈಗ ಫಸ್ಟ್ ಪಿಯುಸಿಗೆ ಅಡ್ಮಿಷನ್ಸ್​ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆಯನ್ನು ಹೊರಡಿಸಿದೆ. ಎಸ್​ಎಸ್​ಎಲ್​​ಸಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ನಾಳೆಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ.

ಇನ್ನು ಕೊರೊನಾ ಹಿನ್ನೆಲೆಯಲ್ಲಿ ಆನ್​ಲೈನ್​​ನಲ್ಲಿ ದಾಖಲಾತಿಗೆ ಸೂಚನೆ ನೀಡಲಾಗಿರುವುದು ವಿಶೇಷ ಎನಿಸಿದೆ. ಆದರೆ ಎಲ್ಲಾ ಕಡೆ ಆನ್ಲೈನ್ ಸೌಲಭ್ಯ ಇಲ್ಲದ ಕಾರಣ, ಆನ್​ಲೈನ್ ವ್ಯವಸ್ಥೆ ಇಲ್ಲದ ಕಾಲೇಜುಗಳಿಗೂ ಕೂಡಾ ಅಡ್ಮಿಷನ್ ಗೆ ಅವಕಾಶ ನೀಡಲಾಗಿದೆ. ಇಲ್ಲಿ ಅರ್ಜಿಗಳನ್ನ ನೇರವಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿತರಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ ಎಂದು ಕೂಡಾ ತಿಳಿಸಲಾಗಿದೆ. ನಾಳೆಯಿಂದ ದಾಖಲಾತಿ ಆರಂಭ ಎಂಬುದು ಖಚಿತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here