ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿದ್ದ ಸಂಗೀತ ಕಾರ್ಯಕ್ರಮ ಕನ್ನಡ ಕೋಗಿಲೆ ಮೂಲಕ ಬೆಳಕಿಗೆ ಬಂದ ಪ್ರತಿಭೆ ಖಾಸಿಂ ಆಲಿ. ತನ್ನ ಕಂಠದಿಂದ ಇಡೀ ಕರ್ನಾಟಕದ ಜನತೆಯ ಮನಗೆದ್ದ ಪ್ರತಿಭೆ ಖಾಸಿಂ ಆಲಿಯ ಗಾನಸುಧೆಯ ಭಾವಲಹರಿಯ ಸಂಗೀತ ಇಂಪಾದ ಧ್ವನಿಯನ್ನು ಕೇಳದೆ ಇರುವವರೇ ಕಮ್ಮಿ. ಖಾಸಗಿ ವಾಹಿನಿಯೊಂದರ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಖಾಸಿಂ ಅಲಿ ಯಾರಿಗೆ ಪರಿಚಯವಿಲ್ಲ ಹೇಳಿ. ಅಷ್ಟೇ ಅಲ್ಲ ತನ್ನ ಅದ್ಭುತ ಕಂಠಸಿರಿಯಿಂದ ಖಾಸಿಮ್ ರಿಯಾಲಿಟಿ ಶೋ ವಿನ್ನರ್ ಕೂಡ ಆಗಿದ್ದ. ಇಡೀ ಕರ್ನಾಟಕದ ಜನರ ಮೆಚ್ಚುಗೆಗೆ ಪಾತ್ರವಾಗಿರೋ ಖಾಸಿಮ್ ಅಲಿ ಮೇಲೆ ಇದೀಗ ಅವರ ಸ್ವಂತ ಗ್ರಾಮದ ಜನರೇ ಸಿಟ್ಟಾಗಿದ್ದಾರೆ. ಅಲ್ಲದೇ ಖಾಸಿಂಗೆ 25 ಸಾವಿರ ರೂಪಾಯಿ ದಂಡವನ್ನು ಹಾಕಿದ್ದಾರೆ.

ರಿಯಾಲಿಟಿ ಶೋನಲ್ಲಿ ನಮ್ಮ ಊರಿನ ಹೆಸರು ಹೇಳಿಲ್ಲ ಅಂತಾ ಸಾವಸಗಿ ಗ್ರಾಮಸ್ಥರು ದಂಡ ವಿಧಿಸಿದ್ದಾರೆ. ಪ್ರತಿ ಎಪಿಸೋಡ್ನಲ್ಲೂ ಹಾವೇರಿ ಮತ್ತು ಹಾನಗಲ್ ಅಂತಾ ಹೇಳುತ್ತಿದ್ದದ್ದು ಯಾಕೆ? ನಮ್ಮೂರಲ್ಲಿ ಹುಟ್ಟಿ ಬೆಳೆದು ಹುಟ್ಟಿದ ಊರು ಹೆಸರು ಬೇಡವಾ ನಿನಗೆ? ಊರಿನ ಮೇಲೆ ಮತ್ತು ಗ್ರಾಮಸ್ಥರ ಮೇಲೆ ಅಭಿಮಾನ ಇದ್ದಿದ್ರೆ ಹೇಳುತ್ತಿದ್ದೆ. ನೀನು ನಮ್ಮೂರಿನ ರೈತರ ಬಗ್ಗೆ ಹಗುರವಾಗಿ ಮಾತಾನಾಡಿದ್ದೀಯಾ. ನೀನು ಹೇಳಿದ ಊರಿನಲ್ಲೇ ಬದುಕಿಕೋ ಹೋಗು ಎಂದು ಗ್ರಾಮಸ್ಥರು ಆವಾಜ್ ಹಾಕಿದ್ದಾರೆ.

ಗ್ರಾಮಸ್ಥರ ಬೆದರಿಕೆಗೆ ಸಿಂಗರ್ ಖಾಸಿಮ್ ಅಲಿ ಮತ್ತು ಆತನ ತಂದೆ ದಾವುಲಸಾಬ್ ಭಯಭೀತವಾಗಿದ್ದಾರೆ. ಏನು ಮಾಡಬೇಕು ಅಂತಾ ತಿಳಿತಿಲ್ಲ. ನಾನೇನು ತಪ್ಪು ಮಾಡಿಲ್ಲಾ. ನಾನು ಪ್ರತಿ ಎಪಿಸೋಡ್ ಅಲ್ಲಿ ಹೇಳಿದ್ದೇನೆ, ಅದನ್ನು ತೆಗೆದು ಹಾಕಿದ್ದಾರೆ. ನನ್ನ ತಪ್ಪು ಏನಿಲ್ಲ. ಆದರೂ ನಾನು ಮತ್ತು ನನ್ನ ಕುಟುಂಬ ಕ್ಷಮೆ ಕೇಳಿದ್ದೇವೆ. ಗ್ರಾಮಸ್ಥರು ಹೇಳಿದ ಹಾಗೇ ನಾವು ದಂಡ ಕಟ್ಟಲು ಸಿದ್ಧರಾಗಿದ್ದೇವೆ ಅಂತಾ ಖಾಸಿಮ್ ತಮ್ಮ ನೋವು ತೊಂಡಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here