ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಗೆದ್ದ ಅನನ್ಯ ಪ್ರತಿಭೆ ನಯನ.ತನ್ನ ಅದ್ಬುತವಾದ ಅಭಿನಯದ ಮೂಲಕ ಎಲ್ಲರಿಗೂ ಇಷ್ಟ ವಾಗಿದ್ದ ನಯನ ತನ್ನ ಗೆಳೆಯ ಶರತ್ ಜೊತೆ  ಸಪ್ತಪದಿ ತುಳಿದಿದ್ದಾರೆ.

ಇತ್ತೀಚೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸರಳವಾಗಿ ವಿವಾಹ ಮಾಡಿಕೊಂಡಿರುವ ನಯನ ಅವರು ಬೆಂಗಳೂರಿನಲ್ಲಿ ಸ್ನೇಹಿತರಿಗೆ ಆರತಕ್ಷತೆ ಸಮಾರಂಭ ಇಟ್ಟುಕೊಂಡಿದ್ದರು.ಈ ಕಾರ್ಯಕ್ರಮಕ್ಕೆ ನಯನ ಕುಟುಂಬದ ಸದಸ್ಯರು ಮತ್ತು ನಯನ ಪತಿ ಶರತ್ ಕುಟುಂಬದ ಸದಸ್ಯರು ಈ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಶರತ್ ಮೂಲತಃ ಉದ್ಯಮಿಯಾಗಿದ್ದು ನಯನ ಅವರಿಗೆ ಸಂಭಂದಿಕರೇ ಆಗಬೇಕಂತೆ.ಹೆಚ್ಚು ಆಡಂಬರವಿಲ್ಲದೇ ಸರಳವಾಗಿ ನಯನ ಮತ್ತು ಶರತ್ ವಿವಾಹ ನಡೆದಿದೆ.ಈ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ಕೂಡ ಬಂದು ನವ ವಧುವರರಿಗೆ ಶುಭಹಾರೈಸಿದ್ದಾರೆ‌.

ಶಿವರಾಜ್ ಕೆ ಆರ್ ಪೇಟೆ ಈ ಜೋಡಿ ಜೊತೆ ಸೆಲ್ಫೀ ತೆಗೆದುಕೊಂಡು ಜೋಡಿಗೆ ಹಾರೈಸಿದ್ದಾರೆ‌.ಅದ್ಬುತವಾದ ಪ್ರತಿಭೆಯಾಗಿರುವ ನಯನ ಅವರು ಇತ್ತೀಚಿಗೆ ಸಾಕಷ್ಟು ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ.

ದರ್ಶನ್ ಅಭಿನಯದ ಯಜಮಾನ ,ವಿನಯ್ ರಾಜ್ಕುಮಾರ್ ಅಭಿನಯದ ಅನಂತು v/s ನುಸ್ರತ್ ಸಿನಿಮಾಗಳಲ್ಲಿ ನಯನ ಅಭಿನಯಿಸುತ್ತಿದ್ದಾರೆ‌.ನಯನ ಅವರ ದಾಂಪತ್ಯ ಜೀವನ ಸುಖಮಯವಾಗಿರಲೆಂದು ನಾವು ಹಾರೈಸೋಣ‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here