ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳು ಸ್ತಬ್ಧವಾಗಿದೆ. ಅಲ್ಲದೆ ಸಾಂಪ್ರದಾಯಿಕ ಆಚರಣೆಗಳು, ವಿವಾಹ, ನಾಮಕರಣ ಇತರೆ ಸಂಭ್ರಮಾಚರಣೆಗಳಿಗೂ ಬ್ರೇಕ್ ಬಿದ್ದಿದೆ. ಇಂತಹ ಸಂದರ್ಭಗಳಲ್ಲಿ ನಿಶ್ಚಯವಾಗಿರುವ ಮದುವೆಗಳನ್ನು ಸಾಧ್ಯವಾದರೆ ಮುಂದೂಡುವ, ಇಲ್ಲವೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬಹಳ ಸರಳವಾಗಿ ವಿವಾಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲೆಡೆ ಇದೆ. ಅಂತಹುದೇ ಒಂದು ವಿವಾಹ ಕೂಡ ನಡೆದಿದ್ದು, ಕಾಮೆಡಿ ಕಿಲಾಡಿಗಳು ಸೀಸನ್ ಮೂರರ ಖ್ಯಾತಿಯ ಹಾಸ್ಯ ಕಲಾವಿದರೊಬ್ಬರ ವಿವಾಹ ಸರಳವಾಗಿ ನಡೆದಿದೆ.

ಕಾಮೆಡಿ ಕಿಲಾಡಿಗಳು ಸೀಸನ್ ಮೂರರ ಮೂಲಕ ಜನರ ಮೆಚ್ಚುಗೆ ಪಡೆದ ಹಾಸ್ಯ ಕಲಾವಿದ ಸಂತೋಷ್ ಕುಮಾರ್ ಅವರ ಮದುವೆ ಸರಳವಾಗಿ ನಡೆದಿದ್ದು, ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ ಗೆಳಯರೇ ಇಂದು ನಿಮ್ಮ ತುಕಾಲಿ ಸ್ಟಾರ್ ಸಂತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಮ್ಮೆಲ್ಲರ ಶುಭ ಹಾರೈಕೆಗಳು ನನ್ನ ಮೇಲೆ ಇರಲಿ ಗೆಳೆಯರೇ.‌ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ನಿಮ್ಮೆಲ್ಲರಿಗೂ ಮದುವೆಯ ಕರೆಯೋಲೆಯನ್ನು ಕಳುಹಿಸುವುದಕ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ಲಾಕ್ ಡೌನ್ ಮುಗಿದ ನಂತರ ನಿಮ್ಮೆಲ್ಲರನ್ನು ಕರೆಯುತ್ತೇನೆ. ಇಂತಿ ನಿಮ್ಮ ತುಕಾಲಿ ಸ್ಟಾರ್ ಸಂತು ಎಂದು ತಮ್ಮ ಪೋಸ್ಟ್ ಮಾಡಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಂತೋಷ್ ಕುಮಾರ್ ಅವರ ಹೊಸ ಜೀವನಕ್ಕೆ ನಾವು ಕೂಡಾ ಶುಭ ಹಾರೈಸೋಣ. ಹಾಸ್ಯ ಕಲಾವಿದನಾಗಿ ಮತ್ತಷ್ಟು ಹೆಸರು ಮಾಡಲಿ ಎಂದು ನಾವು ಶುಭ ಹಾರೈಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here