ಎಂ. ಬಿ. ಪಾಟೀಲ್ ನೇತೃತ್ವದಲ್ಲಿ ರಚನೆಯಾದ 20 ಅತೃಪ್ತ ಶಾಸಕರ ತಂಡದಿಂದ ಸರ್ಕಾರ ಅಸ್ಥಿರವಾಗಬಹುದು ಎಂದು ಮನಗಂಡ ಕಾಂಗ್ರೆಸ್​ ಹೈಕಮಾಂಡ್​ ಎಂ ಬಿ ಪಾಟೀಲ್​ ಅವರಿಗೆ ಬುಲಾವ್​ ನೀಡಿದೆ.ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ. ಸಿ. ವೇಣುಗೋಪಾಲ್​ ಅವರು ಸ್ವತಃ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.ಇದಕ್ಕೂ ಮುನ್ನ ಮಾತನಾಡಿದ ಎಂ‌ಬಿ ಪಾಟೀಲ್ ಪ್ರಜಾಪ್ರಭುತ್ವದಲ್ಲಿ ಚರ್ಚೆ ಮಾಡಲು ತೊಂದರೆ ಇಲ್ಲ.

ನಮ್ಮ ಮನೆಯಲ್ಲಿ ಕುಳಿತು ಚರ್ಚಿಸಲು ಯಾರ ಪರವಾನಿಗೆ ಬೇಕಿಲ್ಲ ಅಂತ ಎಂ.ಬಿ.ಪಾಟೀಲ್ ನೇರವಾಗಿಯೇ ಪಕ್ಷದ ನಾಯಕರಿಗೂ ಸೆಡ್ಡು ಹೊಡೆದಿದ್ದಾರೆ. ನಮ್ಮ ಟೀಂ ನಲ್ಲಿ ನಾನು ಒಬ್ಬನೇ ಅಲ್ಲ, ಬದಲಿಗೆ ಆ ಟೀಂ ನಲ್ಲಿ ನಾನೂ ಒಬ್ಬ ಅಂತ ಪಾಟೀಲ್ ತಿಳಿಸಿದ್ದಾರೆ..ಟೀಂ ಬಿಟ್ಟು ಯಾವುದೇ ನಿರ್ಧಾರ ಆಗಲ್ಲ ಅಂತಲೂ ಎಂ.ಬಿ.ಪಾಟೀಲ್ ಮುಂದೆ ಒಗ್ಗಟ್ಟಾಗಿಯೇ ಮುನ್ನಡೆಯುವ ಸೂಚನೆ ನೀಡಿದ್ದಾರೆ…ನಾನು ಏಕಾಂಗಿಯಲ್ಲ, ನಾವು ಇಪ್ಪತ್ತು ಜನ ಸ್ನೇಹಿತರಿದ್ದೇವೆ ಅಂತ ಎಂ.ಬಿ.ಪಾಟೀಲ್ ಗುಡುಗಿದ್ದಾರೆ.

ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಪಾಟೀಲ್ ಮನೆ ಬಾಗಿಲಿಗೆ ಹೋಗುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ..ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಸಂಪುಟ ರಚನೆಯಾದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟವಾಗಿದ್ದು ಈಗ ಪರಿಸ್ಥಿತಿ ಬಿಗಡಾಯಿಸಿದೆ..ಅತೃಪ್ತರ ಗುಂಪು
ಎಂ‌.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಂ ಟಿ ಬಿ ನಾಗರಾಜ್, ಎನ್ ಎ ಹ್ಯಾರೀಸ್, ಡಾ ಸುಧಾಕರ್, ಬಿ.ಸಿ.ಪಾಟೀಲ್, ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಸಿ ಎಸ್ ಶಿವಳ್ಳಿ, ರಘುಮೂರ್ತಿ, ರೋಷನ್ ಬೇಗ್, ಎಚ್ ಎಂ ರೇವಣ್ಣ, ಸಂಗಮೇಶ್, ತುಕಾರಂ, ಪಿ.ಟಿ‌.ಪರಮೇಶ್ವರ್ ನಾಯ್ಕ್, ನಾಗೇಂದ್ರ, ವಿ ಮುನಿಯಪ್ಪ, ಶಿವರಾಂ ಹೆಬ್ಬಾರ್, ಭೀಮಾ ನಾಯ್ಕ್, ಬಿ ನಾರಾಯಣ್ ಇದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here