City Big News Desk.
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ತರ ನಾವು ಬೇಕಾಬಿಟ್ಟಿ ಕೆಲಸ ಮಾಡುವುದಿಲ್ಲ ನಮ್ಮ ಕೆಲಸ ಏನಿದ್ದರೂ ನೂರಕ್ಕೆ ನೂರು ಸತ್ಯ ಇರುತ್ತದೆ. ಬಿಜೆಪಿಯವರ ತರ ಕಾಂಗ್ರೆಸ್ ಪಕ್ಷವು ಸುಳ್ಳು ಹೇಳುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೌದು, ಬಿಜೆಪಿ ತರ ನಾವು ಕಳಪೆ ರಾಜಕೀಯ, ಕಚಡ ರಾಜಕೀಯ ಮಾಡೋದಕ್ಕೆ ಹೋಗಲ್ಲ ಎಂದು ಬಿಜೆಪಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ 100 ಪಟ್ಟು ಉತ್ತಮ ಆಡಳಿತ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಅವರು ಮತ್ತು ಅವರ ಪರಿವಾರ ಇದೆ. ಅವರದ್ದೇ ವಿಶ್ವವಿದ್ಯಾಲಯ ಇದೆ. ಅದಕ್ಕೆ ವಾಟ್ಸ್ಆಫ್ ವಿಶ್ವವಿದ್ಯಾಲಯ ಅಂತ ಹೆಸರು. ಸುಳ್ಳನ್ನು ಸೃಷ್ಟಿ ಮಾಡುವವರು. ಹಿಟ್ಲರ್ ಸಂಸ್ಕೃತಿಯವರು. ನಿತ್ಯ ಸುಳ್ಳನ್ನು ಸೃಷ್ಟಿ ಮಾಡಿ ಹೊರ ಬಿಡುತ್ತಾರೆ ಎಂದು ಕುಟುಕಿದರು.
ಉಡುಪಿ ಕಾಲೇಜು ಪ್ರಕರಣದ ಬಗ್ಗೆ ಖುಷ್ಬೂ ಸುಂದರ್ ಹೇಳಿದ್ದಾರೆ. ಅವರು ಬಿಜಿಪಿಯವರು. ಯಾವ ವಿಡಿಯೋನೂ ಇಲ್ಲ. ಶೌಚಾಲಯದಲ್ಲಿ ಯಾವ ಹಿಡನ್ ಕ್ಯಾಮೆರಾ ಇರಲಿಲ್ಲ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಅಂತ ಹೇಳಿದ್ದಾರೆ. ಅವರ ಪಕ್ಷದವರೇ ಹೇಳಿದ್ದಾರೆ. ಆದರೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.