ಭಾರತದಲ್ಲಿ ಪ್ರಸ್ತುತ ದೊಡ್ಡ ಸದ್ದು, ಸುದ್ದಿ ಮಾಡುತ್ತಿರುವ ವಿಷಯ, ಮಾದ್ಯಮಗಳಲ್ಲಿ ಗಮನ ಸೆಳೆದಿರುವ ವಿಷಯ ಎಂದರೆ ಅದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಯೋಜನೆ ಆಗಿರುವ ಶಿಲಾನ್ಯಾಸ ಕಾರ್ಯಕ್ರಮ ಅಥವಾ ಭೂಮಿ ಪೂಜೆಯ ಸಂಭ್ರಮ. ಬರಲಿರುವ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಹೂರ್ತ ನಿಗಧಿಯಾಗಿದ್ದು, ಈಗ ವಿಷಯಕ್ಕೆ ಸಂಭಂದಿಸಿದ ಹಾಗೆ ಕಾಂಗ್ರೆಸ್ ನ ಮುಖಂಡ ಕೀರ್ತಿ ಚಿದಂಬರಂ ಅವರು ಟ್ವೀಟ್ ಒಂದನ್ನು ಮಾಡಿ ಭಾರತಕ್ಕೆ ಯಾವುದೇ ಹೊಸ ಮಂದಿರ, ಮಸೀದಿ, ಚರ್ಚ್, ಗುರುದ್ವಾರದ ಅಗತ್ಯವಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ತಾವು 2019 ನವೆಂಬರ್ ನಲ್ಲಿ ಮಾಡಿದ್ದ ಟ್ವೀಟನ್ನು ರೀಟ್ವೀಟ್ ಮಾಡಿದ್ದು ಅದರಲ್ಲಿ “ಭಾರತಕ್ಕೆ ಯಾವುದೇ ಹೊಸ ದೇವಾಲಯ, ಚರ್ಚ್, ಮಸೀದಿ, ಗುರುದ್ವಾರ ಅಥವಾ ಯಾವುದೇ ಪೂಜಾ ಸ್ಥಳಗಳ ಅಗತ್ಯವಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮಲ್ಲಿ ಸಾಕಷ್ಟು ಪೂಜಾ ಸ್ಥಳಗಳಿವೆ, ಅದು ಪುನಃಸ್ಥಾಪನೆ, ನವೀಕರಣ ಮತ್ತು ಸಂರಕ್ಷಣೆಯ ಅಗತ್ಯವಿದೆ.” ಎಂದು ಹೇಳಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here