ಮೈತ್ರಿ ಸರ್ಕಾರದ ಮತ್ತೊಂದು ವಿಜೆಟ್ ಪತನವಾಗಿದೆ. ಶಿವಾಜಿನಗರದ ಶಾಸಕ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ರಾಜೀನಾಮೆ ನೀಡಿದವರಲ್ಲಿ ಇವರು 14 ನೆಯವರಾಗಿದ್ದಾರೆ. ರೋಷನ್ ಬೇಗ್ ಅವರು
ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ತೆರಳಿ ರಾಜೀನಾಮೆಯನ್ನು ಸಲ್ಲಿಸಿದರು. ರೋಷನ್ ಬೇಗ್ ಅವರು ತಮ್ಮ ರಾಜೀನಾಮೆ ಸಲ್ಲಿಸುವ ಸಮಯದಲ್ಲಿ ಸ್ಪೀಕರ್ ಕೊಠಡಿಯಲ್ಲಿ ಕೃಷ್ಣಬೈರೇಗೌಡ ಮತ್ತು ಕೆಜೆ ಜಾರ್ಜ್ ಕೂಡಾ ಇದ್ದರು ಎನ್ನಲಾಗಿದೆ. ಸಿದ್ಧರಾಮಯ್ಯನವರ ವಿರುದ್ಧ ಲೋಕಸಭಾ ಚುನಾವಣೆಯ ನಂತರ ಬಹಿರಂಗವಾಗಿ ಟೀಕೆ ಮಾಡಿದ್ದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ನಿಂದ ಕೆಲವು ದಿನಗಳ ಹಿಂದೆಯೇ ಉಚ್ಛಾಟನೆ ಮಾಡಲಾಗಿತ್ತು.

ತಮ್ಮ ರಾಜೀನಾಮೆ ನಿರ್ಧಾರದ ಕುರಿತು ರೋಷನ್ ಬೇಗ್ ಅವರು ಭಾನುವಾರವೇ ಮಾತನಾಡಿದ್ದರು. ಆ ಸಂದರ್ಧದಲ್ಲಿ ಅವರು ಕಾಂಗ್ರೆಸ್ ನನ್ನನ್ನು ಈಗಾಗಲೇ ಅಮಾನುತು ಮಾಡಿದೆ ಎಂದು ಹೇಳುತ್ತಾ, ತಾನಾಡಿದ ಮಾತುಗಳನ್ನು ಅಪರಾಧವಾಗಿ ಪರಿಗಣಿಸಿ ನನ್ನನ್ನು ಉಚ್ಛಾಟನೆ ಮಾಡಲಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನ ನಡವಳಿಕೆಯನ್ನು ಕುರಿತು ಕೂಡಾ ಅವರು ಅಸಮಾಧಾನವನ್ನು ಹೊರಹಾಕಿದ್ದರು. ರಾಜಕೀಯ ಸಮನ್ವಯತೆ ಇದ್ದಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಯಾವೊಬ್ಬ ನಾಯಕರು ರಾಮಲಿಂಗಾ ರೆಡ್ಡಿ ಅವರ ಸಲಹೆ ಸೂಚನೆ ಪಡೆಯಲಿಲ್ಲ, ಆದರೆ ಈಗ ಎಲ್ಲರಿಗೂ ನಾವು ಸ್ಮರಣೆಗೆ ಬಂದಿದ್ದೇವೆ. ಆದರೆ ನನಗೆ ಮಂತ್ರಿ ಆಗಲು ಇಷ್ಟವಿಲ್ಲ, ಯಾವುದೇ ಪದವಿಯು ನನಗೆ ಬೇಡ ಎಂದು ಅವರು ಹೇಳಿದ್ದಾರೆ. ನಾಯಕರಿಗೆ ಈಗ ತಮ್ಮ ನೆನಪಾಗಿರುವುದನ್ನು ನೆನೆದು ಅವರು ವ್ಯಂಗ್ಯ ಆಡಿರುವುದು ಮಾತ್ರವಲ್ಲದೇ ತಮ್ಮ ಅಸಮಾಧನವನ್ನು ಕೂಡಾ ಹೊರಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here