ಕಾಂಗ್ರೆಸ್ ನ ಸಂಸದ ಶಶಿ ತರೂರ್ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡು ಚರ್ಚಗೆ ಗ್ರಾಸವಾಗುತ್ತಾರೆ. ಈಗ ಮತ್ತೊಮ್ಮೆ ಅವರೊಂದು ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದು , ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಹಾಕಿದ್ದು, ಈಗ ಅದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕಳೆದ ಗುರುವಾರ ಶಶಿ ತರೂರ್ ಅವರು ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಹಾಗೂ ಮಗನನ್ನು ತಮ್ಮ ಕಛೇರಿಯಲ್ಲಿ ಭೇಟಿ ಮಾಡಿದ್ದು , ಅವರ ಕುಟುಂಬಕ್ಕೆ ತಮ್ಮ ನೆರವನ್ನು ವಿಸ್ತರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

 

ಈ ಮಾತುಕತೆ ಮುಗಿದ ನಂತರ ಶಶಿ ತರೂರ್ ಅವರು ತಾವು ಸಂಜೀವ್ ಭಟ್ ಅವರ ಕುಟುಂಬದೊಡನೆ ಚರ್ಚೆಯಲ್ಲಿ ತೊಡಗಿದ್ದ, ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು , ಅವರೊಂದಿಗೆ ನಡೆದ ಮಾತುಕತೆ ಒಂದು ಭಾವನಾತ್ಮಕ ಮಾತುಕತೆಯಾಗಿದ್ದು, ನ್ಯಾಯ ಉಳಿಯಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರು ಹಾಕಿರುವ ತಮ್ಮ ಕಛೇರಿಯ ಫೋಟೋಗಳನ್ನು ಸರಿಯಾಗಿ ನೋಡಿದಾಗ ಅವರ ಟೇಬಲ್ ಮೇಲೆ ಇರುವ ರಾಷ್ಟ್ರ ಧ್ವಜ ತಲ ಕೆಳಗಾಗಿದ್ದು ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ.

ಶಶಿ ತರೂರ್ ಅವರ ಕಛೇರಿ ಟೇಬಲ್ ಮೇಲೆ ಇರಿಸಿರುವ ರಾಷ್ಟ್ರ ಧ್ವಜದಲ್ಲಿ ಹಸಿರು ಬಣ್ಣ ಮೇಲಿದ್ದು, ಕೇಸರಿ ಬಣ್ಣ ಕೆಳಗೆ ಬಂದಿದೆ. ಇದನ್ನು ಗಮನಿಸಿದ ನೆಟ್ಟಿಗರು ಮೊದಲು ರಾಷ್ಟ್ರ ಧ್ವಜಕ್ಕೆ ಗೌರವವನ್ನು ಕೊಡುವುದನ್ನು ಕಲಿಯಿರಿ ಎಂಬುದಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅದು ಮಾತ್ರವಲ್ಲದೆ ಇನ್ನೂ ಹಲವಾರು ಜನರು ಶಶಿ ತರೂರ್ ಅವರನ್ನು ತಮ್ಮದೇ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಷ್ಟ್ರ ಧ್ವಜ ತಲೆ ಕೆಳಗಾಗಿ ಇದ್ದರೂ ನೋಡಿಕೊಳ್ಳದೆ ಇರುವುದು ಸಂಸದರು ತಮ್ಮ ಟೇಬಲ್ ಮೇಲಿರುವುದನ್ನು ಕೂಡಾ ಗಮನಿಸಿದೆ ,ಎಂತಹ ಜಾಗರೂಕತೆ ವಹಿಸಿದ್ದಾರೆ ಎಂಬುದನ್ನು ಯೋಚಿಸುವಂತೆ ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here