ಕಾಂಗ್ರೆಸ್ ಶಾಸಕರ ರಾಜೀನಾಮೆಯ ವಿಷಯದಲ್ಲಿ ಮಾತನಾಡಿದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು , ಈ ರಾಜೀನಾಮೆ ವಿಷಯದಲ್ಲಿ ಬಿಜೆಪಿ ಮಿತ್ರರು ಜನರ ಕಿವಿಯಲ್ಲಿ ಹೂ ಇಡುತ್ತಿದ್ದಾರೆ‌ ಎಂದು ಹೇಳಿಕೆ ನೀಡಿದ್ದಾರೆ. ನಮಗೂ ಶಾಸಕರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಯವರು ಹೇಳಿಕೊಂಡು ಬರುತ್ತಿದ್ದಾರೆ, ಆದರೆ ಮುಂಬೈ, ಅಲ್ಲಿನ ಹೊಟೇಲ್, ವಿಮಾನದ ವ್ಯವಸ್ಥೆ ಇದೆಲ್ಲವನ್ನು ಮಾಡಿರುವುದೇ ಬಿಜೆಪಿಯವರು. ಅವರಿಗೆ ಮಾನ ಮಾರ್ಯಾದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ಅವರು ಎಲ್ಲವನ್ನು ಒಪ್ಪಿಕೊಳ್ಳಲಿ ಎಂದಿದ್ದಾರೆ.

ಕೆಕೆ ಗೆಸ್ಟ್ ಹೌಸ್ ಬಳಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ಪಂಚಾಯ್ತಿಗಳಲ್ಲಿ ಇದ್ದಂತೆ ಬಿಜೆಪಿಯವರು ಎಲ್ಲವನ್ನು ನಾವು ಮಾಡ್ತಾ ಇರೋದು ಅಂತ ಒಪ್ಪಿಕೊಳ್ಳಲಿ. ಶಾಂತಿ ಪ್ರಿಯರು ಅಂತ ಹೇಳ್ಕೊಂಡು ಇಂತಹ ಕೆಲಸ ಮಾಡೋ ಬದಲಿಗೆ ,ನಾವೇ ಮಾಡಿದ್ದು, ನಮಗೆ ಚೇರ್ ಬೇಕು, ಈ ಆಪರೇಷನ್ ಕೂಡಾ ನಮ್ಮದೇ ಅಂತ ಒಪ್ಪಿಕೊಳ್ಳಲಿ ಎಂದ ಅವರು, ರಾಜ್ಯದ ಜನರು ಎಲ್ಲವನ್ನೂ ನೋಡ್ತಾ ಇದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಸರ್ಕಾರದಲ್ಲಿ ಇನ್ನೂ ವಿಶ್ವಾಸ ಇದೆ ಎಂದು ಕೂಡಾ ಹೇಳಿದ್ದಾರೆ.

ವಿಶ್ವಾಸ ಮತದ ವೇಳೆಗೆ ನಮ್ಮ ಶಾಸಕರು ನಮ್ಮ ಬೆಂಬಲಕ್ಕೆ ಬರುತ್ತಾರೆ. ಅಲ್ಲದೆ ಕಾರ್ಯಕರ್ತರು, ಜನರು ಅವರಿಗೆ ರಾಜೀನಾಮೆ ಬೇಡವೆಂದಿದ್ದು, ನಮ್ಮ ಶಾಸಕರು ಕರುಣೆಯುಳ್ಳವರು ಎಂದಿದ್ದಾರೆ. ಅವರು ನಮ್ಮ ಪರವಾಗಿ ಮತ ಹಾಕಿ, ಸರ್ಕಾರವನ್ನು ಉಳಿಸಿಕೊಳ್ತಾರೆ ಎಂದು ಭರವಸೆಯ ಮಾತನ್ನು ಆಡಿದ್ದಾರೆ. ಎಂಟಿಬಿ ನಾಗರಾಜ್ ತಮ್ಮ ಮೇಲೆ ಯಾರ್ಯಾರ ಒತ್ತಡ ಇದೆ ಎಂಬ ನೋವನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ ಎಂದು ಕೂಡಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here