ರಾಜ್ಯ ವಿಧಾನಸಭೆಗೆ ಅವಧಿಗಿಂತ ಮೊದಲೇ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಚುನಾವಣೆಗೆ ಸಿದ್ಧರಾಗಿ ಎಂದು ಕೈ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಅವರು ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ದ. ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಈ ಸೂಚನೆಯನ್ನು ನೀಡಿದ್ದಾರೆ. ರಾಜ್ಯದಲ್ಲಿರುವುದು ಅನೈತಿಕ ಸರ್ಕಾರವಾಗಿದ್ದು, ಇದು ಯಾವಾಗ ಬೇಕಾದರೂ ಪತನವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ ಸಿದ್ಧರಾಮಯ್ಯನವರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ, ಅದಕ್ಕೆ ಎಲ್ಲರೂ ಸಜ್ಜಾಗಿರಿ ಎಂದಿದ್ದಾರೆ ಸಿದ್ಧರಾಮಯ್ಯನವರು. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರು ಮೋಜು ಮಸ್ತಿಯಲ್ಲಿ, ಫೋಟೋ ಶೂಟ್ ನಲ್ಲಿ ತೊಡಗಿ, ರಾಜ್ಯದಲ್ಲಿ ಇರುವ ಪ್ರವಾಹ ಪರಿಸ್ಥಿತಿಯನ್ನು ಅವರು ಕಡೆಗಣಿಸಿದ್ದಾರೆ‌. ನೆರೆ ಸಂತ್ರಸ್ತರಿಗೆ ನೆರವು ನೀಡದ ಇದು ಮನುಷತ್ವ ಕಳೆದುಕೊಂಡ ಸರ್ಕಾರ ಎಂದು ಜರೆದಿದ್ದಾರೆ‌. ಪ್ರಧಾನಿಯವರಿಗೆ ಕನಿಷ್ಠ ಪಕ್ಷ ವೈಮಾನಿಕ ಸಮೀಕ್ಷೆ ನಡೆಸಿಲ್ಲ, ಯಡಿಯೂರಪ್ಪ ಅವರು ಪ್ರಧಾನಿ ಬರುತ್ತಾರೆ, ಪರಿಸ್ಥಿತಿ ಬಗ್ಗೆ ಗಮನ ಸೆಳೆಯುತ್ತೇವೆ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ? ಎಂದು ಟೀಕೆ ಮಾಡಿದ್ದಾರೆ.

ದೇಶದ ಆರ್ಥಿಕ ಹಿಂಜರಿಕೆಗೆ ಪ್ರಧಾನಿ ಕಾರಣ ಎಂದ ಅವರು, ಬಿಜೆಪಿಯವರು ಖರೀದಿಸಿ ರಾಜೀನಾಮೆ ನೀಡಿದ 17 ಶಾಸಕರು ಈಗ ಅಂತರ್ ಪಿಶಾಚಿಗಳಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವವರಿಗೆ ಡಿಸಿಎಂ ಪದವಿ ಕೊಡುವ ಇವರಿಗೆ ಏನು ಹೇಳಬೇಕೆಂದು ಅಸಮಾಧಾನ ಹೊರಹಾಕಿದ್ದಾರೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಮೂಲಕ ವಿರೋಧ ಪಕ್ಷದವರನ್ನು ಬೆದರಿಸುವ ಕಾರ್ಯ ದೇಶದಲ್ಲಿ ನಡೆಯುತ್ತಿದೆ ಎಂದ ಅವರು ಪ್ರಸ್ತುತ ರಾಜಕೀಯವು ಅಸ್ಥಿರವಾಗಿದೆಯೆಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here