ಈ ಬಾರಿಯ ಚುನಾವಣೆ ರಂಗೇರಿದ್ದು ರಾಜಕೀಯ ಪಕ್ಷಗಳು ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ನೀತಿ ಸಂಹಿತೆಗಳನ್ನು ಮೀರಿ ಇನ್ನಿಲ್ಲದ ಕಸರತ್ತು ಪ್ರದರ್ಶಿಸುವ ಭರದಲ್ಲಿವೆ ,ಚುನಾವಣಾ ಪ್ರಚಾರಕ್ಕೆ ಅಂತಾನೆ ಚುನಾವಣಾ ಆಯೋಗ ಹಲವಾರು ನೀತಿಗಳನ್ನು ಮತ್ತು ನಿಯಮಗಳನ್ನು ವಿಧಿಸಿದೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಬಾರದು ಎಂದು ಹೇಳಿದ್ದರೂ ಕೂಡ ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಚಿಕ್ಕ ಮಕ್ಕಳು ಪ್ರಚಾರದಲ್ಲಿ ತೊಡಗಿದ್ದು ಇದಕ್ಕೆ ಸಾರ್ವಜನಿಕರು ತೀವಚರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂವಿಧಾನದ ಪ್ರಕಾರ ಮಕ್ಕಳನ್ನು ಪಕ್ಷದ ಅಥವಾ ವೈಯುಕ್ತಿಕ ಪ್ರಚಾರಕ್ಕೆ , ಕಾರ್ಯಗಳಿಗೆ ಬಳದುವಂತಿಲ್ಲ ಎಂಬ ನಿಯಮಗಳಿವೆ.ಆದರೂ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಕೃಷ್ಣ ಕ್ಷೇತ್ರದ ಗೋವಿಂದರಾಜನಗರದ ವ್ಯಾಪ್ತಿಯಲ್ಲಿ ಮಕ್ಕಳು ಈ ರೀತಿ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ಕಾರ್ಯಕರ್ತರು ತಡೆಯುವ ಪ್ರಯತ್ನ ಮಾಡದೇ ತಮ್ಮ ಜೊತೆಯಲ್ಲಿ ಪಕ್ಷದ ಮತ್ತು ಅಭ್ಯರ್ಥಿ ಪರ ಗೋಷವಿರುವ ಬಿತ್ತಿ ಪತ್ರಗಳನ್ನು ನೀಡಿ ತಮ್ಮ ಜೊತೆ ಪಕ್ಷದ ಪ್ರಚಾರ ಮಾಡಲು ಉತ್ತೇಜಿಸಿದ್ದಾರೆ. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವಿರೋಧ ಮತ್ತು ಅಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಮಕ್ಕಳ ಇಲಾಖೆ ಮತ್ತು ಚುನಾವಣಾ ಆಯೋಗ ಐಅವ ರೀತಿಯ ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here