ಶಹಾಪುರ: ಭಾರತದಲ್ಲಿ ಸಹಕಾರ ಚಳುವಳಿಯು ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರ ಸಹಕಾರ, ತನು ಮನದ ಸೇವೆಯಿಂದ ಸಾಧ್ಯವಾಗಿದ್ದು ಅಂತಹವಾರ ಸಾಲಿನಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹಾರಲಾಲ್ ನೆಹರು ಅಗ್ರಗಣ್ಯ ಎನಿಸಿಕೊಂಡಿದ್ದಾರೆ ಎಂದು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಭೀಮರೆಡ್ಡಿ ಭೈರೆಡ್ಡಿ ಗೋಗಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು, ಜಿಲ್ಲಾ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟ ಮತ್ತು ತಾಲೂಕ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತ ಅಶ್ರಯದ ಸಹಕಾರ ಸಪ್ತಾಹ ಆಚರಣೆಯನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಸಹಕಾರ ತತ್ವ ಸಿದ್ಧಾಂತ ಅಮೂಲ್ಯವಾಗಿದ್ದು ಅಚಾರಣೆಯಲ್ಲಿ ನೆಹರು ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇತ್ತು. ಭಾರತವನ್ನು ಆರ್ಥಿಕವಾಗಿ ಮುಂದುವರಿಸಲು ಸಹಕಾರ ತತ್ವ ಮೊರೆ ಹೋದರು ಮತ್ತು ಸಹಕಾರ ಸಂಘಗಳ ವಿಸ್ತರವಾಗಿ ಬೆಳೆಯಲು ಹಲವಾರು ಯೋಜನೆಗಳು ರೂಪಿಸಿದ್ದರು ಎಂದು ತಿಳಿಸಿದರು.
ಜಿಲ್ಲಾ ಸಾಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ದಶನಾಪುರ ಮಾತನಾಡಿ 7 ದಿನಗಳ ಕಾಲ ನಡೆಯುವ ಸಹಕಾರಿ ಸಪ್ತಾಹ ಆಚರಣೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರು ಒಂದೆಡೆ ಸೇರಿ ಚಳುವಳಿಯ ಸಾಧನೆ ಪ್ರಗತಿ ನಡೆಸಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷ ನಾರಾಯಣವರ, ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ, ರೇಖು ಚೌಹಾಣ್, ಶಾಂತಗೌಡ ಸಾದ್ಯಾಪುರ ಬಾಪುಗೌಡ ಎಂ ಸಿ ಪಾಟೀಲ್, ನಿಂಗಣ್ಣ ಪಡಶೆಟ್ಟಿ, ಎಸ್ಜಿ ರಾಮಚಂದ್ರ, ಬಸವರಾಜ ಸಿಂಗ್ರಿ, ಸಹಕಾರ ಸಂಘಗಳ ಅಧಿಕಾರಿ ಶೇಕ ಸಾಬ್, ಅರುಣ್ ಕುಲಕರ್ಣಿ, ವಿಜಯಕುಮಾರ್ ಹಳಿಸಗರ, ಬಸಣ್ಣಗೌಡ ಆಲ್ದಾಳ, ಶಂಕರಗೌಡ ಕರ್ಕಳ್ಳಿ, ದೇವೇಂದ್ರಪ್ಪ ಕನ್ಯಕೊಳ್ಳುರ್, ನಿಂಗಣ್ಣ ಹಯ್ಯಾಳ್, ಮುನಿಯಪ್ಪ ಉಂಡೆಕಲ್, ಶರಣಪ್ಪ ಆರ್ ಎಸ್ ಅರಳುಗುಂಡ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಕಾಶಿಬಾಯಿ ಪಾರಗೊಂಡ, ಸುಜಾತ ಮಠ ಶಂಕರಗೌಡ, ಹಾಗೂ ಅನೇಕ ಸಹಕಾರ ಸಂಘಗಳ ಮುಖ್ಯಸ್ಥರು ಭಾಗವಹಿಸಿದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.