ಕೊರೊನ ವೈರಸ್ ನಿಯಂತ್ರಣಕ್ಕೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ಈಗಾಗಲೇ ನಡೆಯುತ್ತಿದ್ದು, ವಿಶ್ವದಾದ್ಯಂತ ವಿಜ್ಞಾನಿಗಳು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸಂಶೋಧನೆ ನಡೆಯುತ್ತಿದ್ದು, ಈಗ ಮೊದಲ ಬಾರಿಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆಯನ್ನು ವ್ಯಕ್ತಿಯೊಬ್ಬರ ಮೇಲೆ ಪ್ರಯೋಗಿಸಲಾಗಿದೆ ಎಂಬ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಅಲ್ಲದೆ ಈಗಾಗಲೇ ಈ ವಿಡಿಯೋವನ್ನು ಎರಡು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ಅನೇಕರು ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.

ಸಾಮಾನ್ಯವಾಗಿ ಯಾವುದೇ ಹೊಸ ಔಷಧ ಸಂಶೋಧನೆ ಮಾಡಿದರೆ ಅದನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಆದರೆ ಕೊರೊನಾ ವೈರಸ್ ನಿಯಂತ್ರಣದ ಲಸಿಕೆಯನ್ನು ನೇರವಾಗಿ ಮಾನವರ ಮೇಲೆ ಪ್ರಯೋಗ ಮಾಡಲಾಗಿದೆ. ಕೊರೊನಾ ಈಗಾಗಲೇ ವಿಶ್ವದಾದ್ಯಂತ ತನ್ನ ಭೀಕರತೆಯನ್ನು ಪ್ರದರ್ಶನ ಮಾಡುತ್ತಿದ್ದು, ಆದಷ್ಟು ಬೇಗ ನಿವಾರಣೋಪಾಯದ ಅನಿವಾರ್ಯತೆ ಇದ್ದು, ಅದೇ ಹಿನ್ನೆಲೆಯಲ್ಲಿ ಲಸಿಕೆಯನ್ನು ಮಹಿಳೆಯೊಬ್ಬರ ಮೇಲೆ ಪ್ರಯೋಗ ಮಾಡಲಾಗಿದೆ ಎನ್ನಲಾಗಿದೆ.

ಬಯೋಟೆಕ್ನಾಲಜಿ ಕಂಪನಿ ಮಡಾರ್ನಾ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ವಿಜ್ಞಾನಿಗಳು ಜಂಟಿಯಾಗಿ ಎಂಆರ್‌ಎನ್ಎ-1273 ಎಂಬ ಹೆಸರಿನ ಲಸಿಕೆಯೊಂದನ್ನು ಈಗ ಕಂಡು ಹಿಡಿದಿದ್ದು, ಸಿಯಾಟಲ್ ನ ಇಂದು ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ 43 ವರ್ಷದ ಮಹಿಳೆಯೊಬ್ಬರ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ. ಈ ವಿಡಿಯೋ ವನ್ನು ಟ್ವೀಟರ್ ನಲ್ಲಿ ನೋಡಿದ ನೆಟ್ಟಿಗರು ಆ ಲಸಿಗೆಯನ್ನು ತೆಗೆದುಕೊಂಡ ಮಹಿಳೆಯನ್ನು ಹೊಗಳಿದ್ದರೆ, ಇನ್ನೊಂದೆಡೆ ಮತ್ತೆ ಕೆಲವರು ಆಕೆಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here