ಆಗಾಗ ಯಾವುದಾದರೂ ಒಂದು ವಿಷಯಕ್ಕೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚ ವೆಂಕಟ್ ಸದಾ ಸುದ್ದಿಯಲ್ಲಂತೂ ಇರುವುದು ಗೊತ್ತಿರುವ ವಿಷಯ. ಸದ್ಯಕ್ಕೆ ಅವರಿಗೆ ಸಿಕ್ಕಿರುವ ವಿಷಯ ಕೊರೊನಾ. ವಿಶ್ವದಾದ್ಯಂತ ತನ್ನ ಅಟ್ಟಹಾಸವನ್ನು ಕೊರೊನಾ ಮೆರೆಯುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರಲು, ಕೊರೊನಾ ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದರೆ ಶೀಘ್ರವಾಗಿ ಲಸಿಕೆ ಕಂಡುಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿದ್ದು, ರೋಗ ನಿರೋಧಕ ಶಕ್ತಿಯ ವೃದ್ಧಿಯೇ ಸದ್ಯಕ್ಕೆ ಕೊರೊನಾ ನಿಯಂತ್ರಣಕ್ಕೆ ಮಾರ್ಗ ಎನ್ನಲಾಗಿದೆ.

ಆದರೆ ಇದೆಲ್ಲದರ ನಡುವೆ ಹುಚ್ಚ ವೆಂಕಟ್ ಕೊರೊನಾ ಸೋಂಕಿನ ತಡೆಗೆ ಸಲಹೆಯೊಂದನ್ನು ನೀಡುವ ಮೂಲಕ ಜನರು ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದಾರೆ. ಹುಚ್ಚ ವೆಂಕಟ್ ತಮ್ಮ ಸಲಹೆಯನ್ನು ತಿಳಿಸುವಾಗ, ಈಗ ಬಿಪಿ ಅಥವಾ ರಕ್ತದೊತ್ತಡವನ್ನು ಕಂಡು ಹಿಡಿಯಲು ಯಂತ್ರಗಳಿವೆ. ಅದೇ ರೀತಿಯಲ್ಲಿ ದೇಹದಲ್ಲಿ ಕೊರೊನಾ ಇದೆಯೋ ಇಲ್ಲವೋ ಎಂದು ತಿಳಿಯಲು ಕೂಡಾ ಒಂದು ಯಂತ್ರವನ್ನು ಕಂಡು ಹಿಡಿಯಬೇಕೆಂದು ಹೇಳಿದ್ದಾರೆ. ಹುಚ್ಚ ವೆಂಕಟ್ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮನವಿಯನ್ನು ಮಾಡಿದ್ದಾರೆ.

ಬಿಪಿ ಕಂಡು ಹಿಡಿಯೋಕೆ ಹೇಗೆ ಮೆಶಿನ್ ಇದ್ಯೋ ಅದೇ ರೀತಿ ಕೊರೊನಾ ಇದೆಯೋ ಇಲ್ವೋ ತಿಳಿಯೋಕು ಒಂದು ಯಂತ್ರ ಇದ್ದರೆ ಮನೆಯಲ್ಲೇ ಬಹಳ ಸುಲಭವಾಗಿ ಕೊರೊನಾ ಪತ್ತೆ ಹಚ್ಚೋಕೆ ಮತ್ತು ಅದನ್ನು ನಿಯಂತ್ರಣ ಮಾಡೋಕೆ ಕೂಡಾ ಸಾಧ್ಯವಿದೆ ಅನ್ನೋದು ಹುಚ್ಚ ವೆಂಕಟ್ ಅವರು ಅಭಿಪ್ರಾಯವಾಗಿದೆ. ಸದ್ಯಕ್ಕಂತೂ ಹುಚ್ಚ ವೆಂಕಟ್ ನೀಡಿರುವ ಈ ಸಲಹೆಯ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here