ಕೊರೊನಾ ಸೋಂಕು ತಡೆಯುವ ಲಸಿಕೆಯು ಈ ವರ್ಷದ ಕೊನೆಯ ವೇಳೆಗೆ ದೊರೆಕಬಹುದು ಎಂದು ಈ ಹಿಂದೆ ಹೇಳಿದ್ದ ಬಯೋಕಾನ್ ನ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಈಗ ಹೊಸ ವಿಚಾರ ಒಂದನ್ನು ತಿಳಿಸಿದ್ದಾರೆ. ಆಕೆ ಲಸಿಗೆ ಬೇಗ ಸಿಗುವ ಅವಕಾಶದ ಕುರಿತಾಗಿ ಅನುಮಾನವನ್ನು ವ್ಯಕ್ತಪಡಿಸುತ್ತಾ, ಕೊರೊನಾ ವೈರಸ್ ವಿರುಧ್ಧದ ಲಸಿಕೆಯನ್ನು ತಯಾರಿಸಲು ಸುದೀರ್ಘವಾದ ಸಮಯ ಹಿಡಿಯಲಿದೆ ಎಂದು ಆಕೆ ಹೇಳಿದ್ದಾರೆ. ಆದ ಕಾರಣ ನಾವು ಇನ್ನೂ ಕೆಲವು ವರ್ಷಗಳು ಈ ಸೋಂಕಿನ ವಿರುದ್ಧ ಸೆಣಸುವ ಅಗತ್ಯ ಇದೆ ಎಂದು ತಮ್ಮ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ.

ಕೊರೊನಾ ಕುರಿತಾಗಿ ನಡೆದ ವೆಬ್ ಸಂವಾದದಲ್ಲಿ ಅವರು ಈ ವಿಚಾರಗಳನ್ನು ತಿಳಿಸಿದ್ದು, ಇಡೀ ದೇಶಕ್ಕೆ ಅಗತ್ಯವಿರುವ ಲಸಿಕೆ, ಸುರಕ್ಷಿತವಾಗಿರುವ ಲಸಿಕೆಯು ಸಿದ್ಧವಾಗಲು ಬಹಳ ಸಮಯ ಬೇಕಿದ್ದು, ಇದೊಂದು ಕಠಿಣ ಪ್ರಕ್ರಿಯೆ ಆಗಿದೆ ಎಂದಾಕೆ ಹೇಳಿದ್ದಾರೆ. ಅಲ್ಲದೇ 4 ವರ್ಷಗಳಿಂತ ಕಡಿಮೆ ಅವಧಿಯಲ್ಲಿ ಈವರೆಗೆ ಯಾವುದೇ ಔಷಧಿ ಲಭ್ಯವಾಗಿಲ್ಲ ಎಂಬ ವಿಷಯವನ್ನು ನಾವು ಗಮನಿಸಬೇಕಾದ ಅಗತ್ಯ ಇದೆ ಎಂದು ವಿವರಿಸಿದ್ದಾರೆ. ಕೇವಲ ಒಂದು ವರ್ಷದೊಳಗೆ ಲಸಿಕೆ ದೊರೆಯುತ್ತದೆ ಎಂಬುದು ಅಸಾಧ್ಯವಾದ ಮಾತು ಎಂದವರು ಹೇಳಿದ್ದಾರೆ.

ಲಸಿಕೆಯ ಲಭ್ಯತೆ, ಸುರಕ್ಷತೆ, ಕ್ಷಮತೆ ಎಲ್ಲಾ ಸಾಬೀತಾಗಿ ಅದು ದೊರಕುವುದಕ್ಕೆ ದೀರ್ಘ ಸಮಯದ ಅಗತ್ಯ ಇದ್ದು, ಅಲ್ಲಿಯವರೆಗೆ ಕೊರೊನಾವನ್ನು ನಿಭಾಯಿಸಬೇಕು, ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚು ಹೂಡಿಕೆಯನ್ನು ಮಾಡಬೇಕು. ಕೊರೊನಾ ಭಾರತಕ್ಕಷ್ಟೇ ಅಲ್ಲದೇ ಇಡೀ ವಿಶ್ವದ ಮುಂದೆ ಒಂದು ಕಟು ಸತ್ಯವನ್ನು ಬಯಲು ಮಾಡಿದೆ.
ಆರೋಗ್ಯ ಕ್ಷೇತ್ರದ ಒಂದು ಭೀಕರ ಸತ್ಯವನ್ನು ಅದು ಬಹಿರಂಗ ಪಡಿಸಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಕಾಲ‌ ಎಂದು ಹೇಳಿದ್ದಾರೆ ಕಿರಣ್ ಮಜುಂದಾರ್ ಷಾ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here