ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಜಗತ್ತಿನಾದ್ಯಂತ 196 ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4.69 ಲಕ್ಷಕ್ಕೇರಿದೆ. ಇನ್ನು ಭಾರತದಂತಹ ಅಸಂಖ್ಯಾತ ಜನರು ಹಾಗೂ ರೋಗದ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಕೂಡಾ ನಮ್ಮಲ್ಲೂ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಭಾರತದಲ್ಲಿ ಈಗಾಗಲೇ 11 ಜನರನ್ನು ಬಲಿ ಪಡೆದಿದ್ದು, ವಿಶ್ವಾದ್ಯಂತ 21,185 ಮಂದಿ ಮೃತಪಟ್ಟಿರುವುದು ಪರಿಸ್ಥಿತಿಯ ಘೋರತೆಯನ್ನು ಜನರ ಮುಂದೆ ಇಡುತ್ತಿದೆ. ಜಗತ್ತಿನ ಮುಂದುವರೆದ, ವೈದ್ಯಕೀಯ ಸೌಲಭ್ಯಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಜನ ಜೀವನ ಸ್ತಬ್ಧವಾಗಿ, ಸರ್ಕಾರಗಳು ಚಿಂತೆಗೀಡಾಗಿವೆ.

ಎಲ್ಲಕ್ಕಿಂತ ಘೋರ ಎಂದರೆ ಇಟಲಿಯಲ್ಲಿ ದಿನದಿಂದ ದಿನಕ್ಕೂ, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆಯು ಏರುತ್ತಲೇ ಇದೆ. ಇಟಲಿಯಲ್ಲಿ ಬುಧವಾರ ಒಂದೇ ದಿನ 683 ಮಂದಿ ಬಲಿಯಾಗಿರುವುದು ಭಯ ಹುಟ್ಟಿಸುವ ಹಾಗಿದೆ. ಅಲ್ಲಿಗೆ ಇಲ್ಲಿಯವರೆಗೆ ಇಟಲಿಯಲ್ಲಿ 7,503 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸ್ಪೇನ್ ನಲ್ಲಿ ಅಂತೂ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಕೂಡಾ ಮೀರಿಸಿ ಮುಂದಕ್ಕೆ ಹೋಗಿದೆ. ಒಂದೇ ದಿನ ಸ್ಪೇನ್‍ನಲ್ಲಿ 656 ಮಂದಿ ಕೊರೊನಾಗೆ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಫ್ರಾನ್ಸ್ ನಲ್ಲಿ 231 ಜನರು ಹಾಗೂ ಅಮೆರಿಕದಲ್ಲಿ 155 ಮಂದಿ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಪ್ರಿಲ್ 14 ರವರೆಗೂ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೂ ಇದನ್ನು ಮೀರಿ ಅನೇಕರು ಅನಾಗರಿಕರಂತೆ ವರ್ತಿಸುತ್ತದ್ದು, ಇಂತಹ ಅಜಾಗ್ರತೆ, ಅಸಡ್ಡೆಗಳಿಂದಾಗಿದೆ ನಿನ್ನೆ ಅಂದರೆ ಲಾಕ್ ಡೌನ್ ಆದ ಮೊದಲ ದಿನದಂದೇ ದೇಶದಲ್ಲಿ 70 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿದ್ದು, ಜನರಿಗೆ ಬಹುಶಃ ತಮ್ಮವರೆಗೂ ಸೋಂಕು ಬರುವವರೆಗೂ ಬುದ್ಧಿ ಬರುವಂತಿಲ್ಲ ಎನ್ನುವಂತಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here