ಇಡೀ ಜಗತ್ತೇ ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಂಡು, ಅದರ ನಿಯಂತ್ರಣಕ್ಕೆ ಸಜ್ಜಾಗಿರುವಾಗ ಮಾಡೆಲ್ ಒಬ್ಬಾಕೆ ಮಾತ್ರ ವಿಚಿತ್ರವಾದ ವಿಡಿಯೋ ಒಂದನ್ನು ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ಇತರರಿಗೂ ಒಂದು ವಿಚಿತ್ರ ಚಾಲೆಂಜ್ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಇದು ಕಾರಣವಾಗಿದೆ. ಈಕೆ ತನ್ನ ಹುಚ್ಚಾಟದ ವಿಡಿಯೋದಲ್ಲಿ ವಿಮಾನದ ಟಾಯ್ಲೆಟ್ ಅನ್ನು ನೆಕ್ಕುವ ಮೂಲಕ ಟಿಕ್ ಟಾಕ್ ಮಾಡಿದ್ದಾಳೆ. ಇಂತಹ ವಿಚಿತ್ರ ಹುಚ್ಚಾಟವನ್ನು ಮೆರೆದಿರುವುದು ಅಮೆರಿಕ ಮೂಲದ ಅವಾ ಲೌಸಿ ಎನ್ನುವ ಮಾಡೆಲ್.

ಈಕೆ ಇಟ್ಸ್ ಕೊರೊನಾ ಟೈಮ್ ಎಂಬ ಹಾಡಿಗೆ ಡಾನ್ಸ್ ಮಾಡುತ್ತಾ ವಿಮಾನದ ಟಾಯ್ಲೆಟ್ ಅನ್ನು ನೆಕ್ಕುತ್ತಾ ವಿಮಾನದಲ್ಲಿ ನೈರ್ಮಲ್ಯ ಕಾಪಾಡಲು ಹೀಗೆ ಮಾಡಿ ಎಂದು ವಿಡಿಯೋ ಗೆ ಕ್ಯಾಪ್ಷನ್ ಹಾಕಿಕೊಂಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಕೆಂಡಾಮಂಡಲವಾಗಿದ್ದು ಆಕೆಯ ಈ ಹುಚ್ಚು ಪ್ರವರ್ತನೆಯನ್ನು ಸಿಕ್ಕಾಪಟ್ಟೆ ಟೀಕಿಸಿದ್ದು, ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ವಿಡಿಯೋ ವೈರಲ್ ಆಗಿ ಜನರ ಆಕ್ರೋಶಕ್ಕೆ ಒಳಗಾಗಿರುವ ವಿಷಯ ತಿಳಿದೊಡನೇ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ ಅದಾಗಲೇ ಡೌನ್‌ಲೋಡ್ ಮಾಡಿದ ಹಲವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಇನ್ನು ಈಕೆಯ ಕೆಲವು ಹುಚ್ಚು ಅಭಿಮಾನಿಗಳು ಕೂಡಾ ಆಕೆ ನೀಡಿದ ಚಾಲೆಂಜನ್ನು ಸ್ವೀಕರಿಸಿ, ತಾವು ಕೂಡಾ ವಿಮಾನಗಳ ಟಾಯ್ಲೆಟ್ ನೆಕ್ಕಿ, ಆ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ರೀತಿಯ ವಿಡಿಯೋ ಹಾಕುತ್ತ ಇರುವವರನ್ನು ನೆಟ್ಟಿಗರು ಟೀಕೆ ಮಾಡುವ ಜೊತೆಗೆ ಟ್ರೋಲ್ ಕೂಡಾ ಮಾಡುತ್ತಿದ್ದಾರೆ. ಮಾಡೆಲ್ ಒಬ್ಬಳ ಹುಚ್ಚಾಟ ನಿಜಕ್ಕೂ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜನಪ್ರಿಯಳಾಗಲು ಆಕೆ ಆರಿಸಿಕೊಂಡ ವಿಧಾನ ಈಗ ಎಲ್ಲರ ಕೋಪಕ್ಕೆ ಕಾರಣವಾಗಿದೆ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here