ಕೊರೊನಾ ನಿಯಂತ್ರಣಕ್ಕೆ ವಿಶ್ವ ರಾಷ್ಟ್ರಗಳು ಹಗಲು ರಾತ್ರಿ ಸಮರವನ್ನು ನಡೆಸಿದೆ. ಮತ್ತೊಂದೆಡೆ ಕೊರೊನಾವನ್ನು ಎದುರಿಸಲು ಅಗತ್ಯ ಇರುವ ಔಷಧಿ, ಲಸಿಕೆಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ಕೂಡಾ ತೊಡಗಿಕೊಂಡಿದ್ದಾರೆ. ಆದರೆ ಮೂಢ ನಂಬಿಕೆಗಳಿಗೆ ಒಳಗಾದ ಆಲಯದ ಅರ್ಚಕನೊಬ್ಬ ಕೊರೊನಾ ಹೋಗಲಿ ಎಂದು ನರ ಬಲಿ ನೀಡಿರುವ ಭಯಾನಕ ಘಟನೆಯೊಂದು ನಡೆದಿದೆ‌. ಒಡಿಶಾದ ಕಟಕ್ ಜಿಲ್ಲೆಯ
ನರಸಿಂಗ್ ಪುರದ ಪೋಲಿಸ್ ಠಾಣಾ ವ್ಯಾಪ್ತಿಯ ಬಂಧಾಹೂಡಾದ ಬಳಿಯಿರುವ ಬಂಧಾ ಮಾತೆ ಬುಧಾ ಬ್ರಾಹ್ಮಣಿ ದೇವಸ್ಥಾನದ ಹಿರಿಯ ಅರ್ಚಕ ಇಂತಹುದೊಂದು ದುಷ್ಕೃತ್ಯಕ್ಕೆ ತೊಡಗಿರುವುದು ತಿಳಿದು ಬಂದಿದೆ.

ಈ ದೇವಾಲಯದ ಹಿರಿಯ ಅರ್ಚಕನಾದ ಸನ್ಸಾರಿ ಓಝಾ ಎಂಬ 72 ವರ್ಷದ ವ್ಯಕ್ತಿ ಇಂತಹ ಭೀಕರ ಕಾರ್ಯವನ್ನು ಮಾಡಿದ್ದಾರೆ. ಈತ ಕೊರೊನಾ ವೈರಸ್ ಅನ್ನು ಅಂತ್ಯ ಮಾಡುವಂತೆ ದೇವಿಯಲ್ಲಿ ಪ್ರಾರ್ಥಿಸಿ ಸ್ಥಳೀಯ ವ್ಯಕ್ತಿಯೊಬ್ಬನ ರುಂಡವನ್ನು ಕತ್ತರಿಸಿ ನರ ಬಲಿಯನ್ನು ನೀಡಿ ಪೂಜೆಯನ್ನು ಮಾಡಿದ್ದಾನೆ. ಈ ಕುಕೃತ್ಯ ಮಾಡಿದ ನಂತರ ಅರ್ಚಕ ಬುಧವಾರದ ದಿನ ತಾನೇ ಪೋಲಿಸರಿಗೆ ಶರಣಾಗಿದ್ದಾನೆ. ಮೃತ ವ್ಯಕ್ತಿಯನ್ನು ಸರೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಬಲಿ ವಿಷಯಕ್ಕೆ ಇಬ್ಬರ ನಡುವೆ ವ ವಾಗ್ವಾದ ನಡೆದಿದ್ದು, ಅರ್ಚಕನು ಹರಿತವಾದ ಆಯುಧದಿಂದ ಸರೋಜ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.

ಪೋಲಿಸರಿಗೆ ಶರಣಾದ ಅರ್ಚಕನು ವಿಚಾರಣೆ ವೇಳೆ ಪೋಲಿಸರಿಗೆ ತನ್ನ ಕೃತ್ಯದ ಕುರಿದು ಬಾಯ್ಬಿಟ್ಟಿದ್ದು, ಕನಸಿನಲ್ಲಿ ತನಗೆ ದೇವರು ನರ ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದು ನೀಡಿದ ಆದೇಶದ ಮೇರೆಗೆ ತಾನು ನರ ಬಲಿಯನ್ನು ನೀಡಿದ್ದಾಗಿ ಹೇಳಿದ್ದಾನೆ. ಅರ್ಚಕನು ಕೊಲೆಗೆ ಬಳಸಿದ ಆಯುಧವನ್ನು ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದು, ಬಲಿಯಾದ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ‌.

ಇನ್ನು ಸ್ಥಳೀಯರು ಬಲಿಯಾದ ವ್ಯಕ್ತಿ ಮತ್ತು ಅರ್ಚಕರ ನಡುವೆ ಮಾವಿನ ತೋಟದ ವಿಷಯವಾಗಿ ವೈ ಮನಸ್ಸು ಇತ್ತೆಂದು ತಿಳಿದು ಬಂದಿದೆ. ಡಿಐಜಿ ಅಶೀಶ್ ಕುಮಾರ್ ಅವರು ಈ ಬಗ್ಗೆ ತಿಳಿಸಿದ್ದು, ಬಲಿ ನೀಡುವ ವೇಳೆ ಆ ಅರ್ಚಕ ಸಿಕ್ಕಾಪಟ್ಟೆ ಮದ್ಯಪಾನ ಮಾಡಿದ್ದನು ಎಂದು ತಿಳಿಸಿದ್ದಾರೆ. ಅರ್ಚಕ ಮಾನಸಿಕ ಅಸ್ವಸ್ಥತೆ ಹೊಂದಿದ್ದಾನೆ ಎಂದು ಕೂಡಾ ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here