ಕೊರೋನಾ  ಮಹಾಮಾರಿ ದಿನೇದಿನೇ ವಿಶ್ವದಾದ್ಯಂತ ಹಬ್ಬುತ್ತಿದೆ. ಕೊರೋನಾ ಸೋಂಕಿಗೆ ಇನ್ನೂ ಸಹ ಯಾವುದೇ ರೀತಿಯ ಔಷಧಿಗಳನ್ನು ಕಂಡುಹಿಡಿದಿಲ್ಲ. ಇಷ್ಟುು ದಿನ ಕೋರೋನಾ  ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರೆ ಮಾತ್ರ ಕೊರೋನಾ ಬರುತ್ತದೆ ಎಂದು ತಿಳಿದುಕೊಂಡಿದ್ದ ಜನರಿಗೆ ಇದೀಗ ಅಚ್ಚರಿಯ ಮತ್ತು ಶಾಕ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ.

ಇಷ್ಟು ದಿನ ಸೋಂಕಿತರ ಸಂಪರ್ಕದಲ್ಲಿದ್ದರೆ ಅಥವ ಕೆಮ್ಮು, ಸೀನು ಇಂತಹ ಲಕ್ಷಣಗಳಿದ್ದರೇ ಮಾತ್ರ ಕೊರೋನಾ  ತಗುಲುವ ಸಾಧ್ಯತೆಗಳಿವೆ ಎಂದು ಜನರು ತಿಳಿದಿದ್ದರು. ಆದ್ರೆ  WHOಗೆ ವಿಜ್ಞಾನಿಗಳು ಸಲ್ಲಿಸಿದ ರಿಪೋರ್ಟ್‌ ಮನುಕುಲವನ್ನೇ ಬೆಚ್ಚಿಬೀಳಿಸುವಂತಿದೆ. ಇದೀಗ ಕೊರೋನಾ ವೈರೆಸ್ ಬಗ್ಗೆ ವಿಜ್ಞಾನಿಗಳು ಅಚ್ಚರಿಯ ವರದಿಯನ್ನು WHO ಗೆ ಸಲ್ಲಿಸಿದ್ದಾರೆ.  ಈ ವರದಿಯ ಪ್ರಕಾರ ಕೊರೋನಾ ಮಹಾಮಾರಿ ಗಾಳಿಯಿಂದಲು ಹರಡುತ್ತಿದೆಯಂತೆ.  32 ರಾಷ್ಟ್ರಗಳ 239 ವಿಜ್ಞಾನಿಗಳಿಂದ ಈ ವರದಿ ಮಂಡನೆಯಾಗಿದೆ.  ಸದ್ಯ ವಿಜ್ಞಾನಿಗಳ ವರದಿಯನ್ನು WHO ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಕೆಮ್ಮು, ಸೀನಿನಿಂದ ಮಾತ್ರ ವೈರಸ್ ಹರಡುತ್ತೆ ಎಂದು  WHO ಹೇಳಿತ್ತು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here