ಕರೋನ ವೈರಸ್ ಸಾಂಕ್ರಾಮಿಕದ ಭೀತಿಯಿಂದ 21 ದಿನಗಳ ಕಾಲ ರಾಷ್ಟ್ರೀಯ ಲಾಕ್‌ಡೌನ್ ಆಗಿರುವ ದಕ್ಷಿಣ ಆಫ್ರಿಕಾದಲ್ಲಿ ಮೃತರಾದ ಹಿಂದೂ ಧಾರ್ಮಿಕ ಮುಖಂಡ, ಅಲ್ಲಿನ ಸುಪ್ರಸಿದ್ಧ ಹಿಂದೂ ಸ್ವಾಮೀಜಿ ಒಬ್ಬರ ಅಂತ್ಯಕ್ರಿಯೆಯನ್ನು ಅವರ ಅನುಯಾಯಿಗಳಿಗಾಗಿ ಅಲ್ಲಿನ ಆಡಳಿತ ವರ್ಗ ನೇರ ಪ್ರಸಾರವನ್ನು ಮಾಡಿದೆ. ಸ್ವಾಮಿ ಪ್ರೇಮಾನಂದ ಪುರಿ (74) ಅವರು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು. ಅಲ್ಲದೆ ಅವರಿಗೆ ಚಿಕಿತ್ಸೆ ನೀಡುವ ತಜ್ಞರು ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಿದ ಎರಡು COVID -19 ಪರೀಕ್ಷೆಗಳಲ್ಲೂ ಕೂಡಾ ನೆಗೆಟಿವ್ ಎಂದು ವರದಿ ಬಂದಿತ್ತು ಎಂದು ಶ್ರೀ ರಾಮಕೃಷ್ಣ ಧಾಮ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸ್ವಾಮಿ ಪ್ರೇಮಾನಂದ ಪುರಿಯವರು 2001 ರಲ್ಲಿ ಶ್ರೀ ರಾಮಕೃಷ್ಣ ಧಾಮ್ ಆಶ್ರಮವನ್ನು ಅಲ್ಲಿ ಸ್ಥಾಪನೆ ಮಾಡಿದ್ದರು. ಅವರು ಜೋಹಾನ್ಸ್‌ಬರ್ಗ್‌ನ ದಕ್ಷಿಣಕ್ಕೆ ಭಾರತೀಯರು ನೆಲೆಸಿರುವ ವಿಸ್ತಾರವಾದ ಒಂದು ಉಪನಗರ ಲೆನೇಶಿಯಾದಲ್ಲಿ ಸ್ವಾಮಿ ಪ್ರೇಮಾನಂದ ಅವರು ಅತ್ಯಂತ ಪೂಜ್ಯ ಹಿಂದೂ ಧಾರ್ಮಿಕ ಮುಖಂಡರಲ್ಲಿ ಒಬ್ಬರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ನಿರ್ಬಂಧದಿಂದಾಗಿ ಅಂತ್ಯಕ್ರಿಯೆಯಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಿ, ಶ್ರೀ ರಾಮಕೃಷ್ಣ ಧಾಮ್‌ನ ನೂರಾರು ಭಕ್ತರನ್ನು ಶವಸಂಸ್ಕಾರ ಸೇವೆಯಿಂದ ದೂರವಿರುವಂತೆ ಮನವಿ ಮಾಡಲಾಗಿತ್ತು.

ಅಲ್ಲದೆ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗದೆ ಮನೆಯಲ್ಲಿ ಉಳಿದವರಿಗೆ ಬೇಸರ ಆಗುವುದು ಬೇಡವೆಂದೂ, ಅಲ್ಲದೆ ಅವಕಾಶ ನೀಡಿದರೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವರು ಎಂಬ ಕಾರಣದಿಂದ ಅಲ್ಲಿನ ಆಡಳಿತವು ಸ್ವಾಮೀಜಿ ಅವರ ಅಂತಿಮ ಸಂಸ್ಕಾರವನ್ನು ನೇರ ಪ್ರಸಾರ ಮಾಡುವ ಮೂಲಕ ಭಕ್ತರಿಗೆ ಸ್ವಾಮೀಜಿ ಅವರ ಅಂತಿಮ ಸಂಸ್ಕಾರವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here