ಮಹಾಮಾರಿ ಕೊರೋನಾ ವಿಶ್ವದ ಅನೇಕ ದೇಶಗಳ ಪಾಲಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಸೋಂಕಿನಿಂದ ಮುಕ್ತಿ ಪಡೆಯಲು ಲಸಿಕೆಯನ್ನು ಕಂಡು ಹಿಡಿಯುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿರುವಾಗಲೇ‌ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಈವಲಸಿಕೆಗಳನ್ನು ಖರೀದಿ ಮಾಡುವ ಒಪ್ಪಂದಗಳನ್ನು ಮಾಡಿಕೊಂಡಿವೆ ಎನ್ನಲಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಶ್ರೀಮಂತ ರಾಷ್ಟ್ರಗಳು 100 ಕೋಟಿಯಷ್ಟು ಸಂಭವನೀಯ ಕೊರೋನಾ ಲಸಿಕೆಯ ಖರೀದಿಗೆ ಮುಂಗಡವಾಗಿ ಒಪ್ಪಂದದ ಮೂಲಕ ಖರೀದಿ ಮಾಡಿವೆ ಎನ್ನಲಾಗಿದೆ.

ಇಂತಹುದೊಂದು ಬೆಳವಣಿಗೆಯಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಾಗೂ ಬಡ ರಾಷ್ಟ್ರಗಳು ಲಸಿಕೆಯು ಸಿದ್ಧವಾದ ನಂತರ ಅದನ್ನು ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗಬಹುದು ಎನ್ನಲಾಗಿದೆ. ಅಮೆರಿಕ, ಬ್ರಿಟನ್, ಜಪಾನ್ ಹಾಗೂ ಕೆಲವು ಐರೋಪ್ಯ ರಾಷ್ಟ್ರಗಳು ಈಗಾಗಲೇ ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳ ಜೊತೆ ಒಪ್ಪಂದಗಳನ್ನು ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಲಸಿಕೆಯನ್ನು ಬಿಡುಗಡೆಗೆ ಮುನ್ನವೇ ಮುಂಗಡವಾಗಿ ಖರೀದಿ ಮಾಡಿಟ್ಟುಕೊಂಡಿವೆ ಎನ್ನಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ‌ ಲಸಿಕೆಯು ಎಲ್ಲಾ ದೇಶಗಳಿಗೂ, ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ಸಿಗುವುದು ಎಂದು ಹೇಳುತ್ತಿದ್ದರೂ ಕೂಡಾ ಅದರ ನಡುವೆಯೇ ಶ್ರೀಮಂತ ರಾಷ್ಟಗಳು ಲಸಿಕೆಯನ್ನು ತಯಾರು ಮಾಡುತ್ತಿರುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿವೆ‌. ಫೋಲಿ ಆ್ಯಂಟ್‌ ಪಾಟ್ರ್ನರ್‌ ಮತ್ತು ಗ್ಲಾಕ್ಸೋ ಸ್ಮಿತ್‌ ಲೈನ್‌ ಕಂಪನಿಯಿಂದ ಈಗಾಗಲೇ ಅಮೆರಿಕ ಹಾಗೂ ಬ್ರಿಟನ್‌ ಒಪ್ಪಂದ ಮಾಡಿಕೊಂಡಿದೆ. ಫೈಜರ್‌ ಎಂಬ ಕಂಪನಿಯಿಂದ ಜಪಾನ್‌ ಲಕ್ಷಾಂತರ ಪ್ರಮಾಣದ ಲಸಿಕೆಯನ್ನು ಪ್ರೀ ಆರ್ಡರ್‌ ಮಾಡಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here