ಕೊರೊನಾ ವೈರಸ್ ಧಾಳಿಯಿಂದ ವಿಶ್ವದ ರಾಷ್ಟ್ರಗಳು ನಲುಗಿ ಹೋಗಿವೆ. ದೇಶವೊಂದರ ಅಜಾಗರೂಕತೆಯಿಂದ ಇಂದು ಇಡೀ ವಿಶ್ವ ಕೊರೊನಾದ ಭೀಕರತೆಗೆ ಬಲಿಯಾಗಿದೆ. ಅನೇಕ ರಾಷ್ಟ್ರಗಳಲ್ಲಿ ಜನಜೀವನ ಸ್ತಬ್ಧವಾಗಿದೆ. ಎಲ್ಲರೂ ಮನೆಗಳಲ್ಲಿ ಉಳಿಯುವ ಹಾಗೆ ಆಗಿದೆ. ಇದರಿಂದ ಸಿರಿವಂತರ ಜೀವನದಲ್ಲಿ ಅಷ್ಟೇನೂ ಬದಲಾವಣೆ ಆಗದೇ ಇರಬಹುದು. ಆದರೆ ದಿನಗೂಲಿ ಮಾಡಿ ಜೀವನ ನಡೆಸುವ ಬಡವರ ಪಾಲಿಗೆ ಕೊರೊನಾ ಅವರ ಜೀವನದ ಮೇಲೆ ತನ್ನ ವಿಕೃತಿ ಯನ್ನು ಮೆರೆಯುತ್ತಿದ್ದು, ತುತ್ತು ಅನ್ನ ಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ.‌

ಇಂತಹ ಸಂಕಷ್ಟಕ್ಕೆ ಗುರಿಯಾದವರು ಸಿನಿಮಾ ರಂಗದಲ್ಲಿ ಕೂಡಾ ಇದ್ದಾರೆ. ಅವರ ಜೀವನ ಕೂಡಾ ಕೊರೊನಾ ದಿಂದ ದುರ್ಬರವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದಕ್ಷಿಣ ಭಾರತದ ಚಿತ್ರೋದ್ಯಮ ಉದ್ಯೋಗಿಗಳ ಸಂಘಟ‌ನೆಯ (ಫಿಲ್ಮ್ ಎಂಫ್ಲಾಯೀಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ) ಮುಖ್ಯಸ್ಥರಾದ ಆರ್.ಕೆ.ಸೆಲ್ವಮಣಿ ಅವರು ಸೂಪರ್ ಸ್ಟಾರ್ ಗಳು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಬೇಕೆಂಬ ಮನವಿಯನ್ನು ಮಾಡಿದ್ದರು. ಅವರ ಮನವಿಗೆ ಸೌತ್ ಇಂಡಿಯನ್ ಸೂಪರ್ ಸ್ಟಾರ್ ಎಂದೇ ಖ್ಯಾತರಾದ ತಲೈವಾ ರಜನಿಕಾಂತ್ ಸ್ಪಂದಿಸಿದ್ದಾರೆ.

ರಜನೀಕಾಂತ್ ಅವರು ಚಿತ್ರೋದ್ಯಮದಲ್ಲಿರುವ ಕಾರ್ಮಿಕರಿಗೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವು ನೀಡಲೆಂದು ಐವತ್ತು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ರಜನೀಕಾಂತ್ ಮಾತ್ರವೇ ಅಲ್ಲದೆ ನಟರಾದ ಶಿವಕಾರ್ತಿಕೇಯ‌ನ್ ಮತ್ತು ವಿಜಯ್ ಸೇತುಪತಿ ಕೂಡಾ ತಲಾ ಹತ್ತು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಎಲ್ಲಾ ಸೂಪರ್ ಸ್ಟಾರ್ ಗಳು ಇದೇ ರೀತಿ ನೆರವಿಗೆ ಮುಂದಾದರೆ ಸಿನಿ ಕಾರ್ಮಿಕರಿಗೆ ಒಂದು ಭರವಸೆಯನ್ನು ನೀಡಿದಂತಾಗುತ್ತದೆ. ಇಂತಹ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ನಡೆಯ‌ಬೇಕಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here