ಕರುನಾಡ ಲ್ಲಿ ಕಾಡಿದೆ ಕೊರೊನಾ ಭೀತಿ.‌ಎಲ್ಲೆಡೆ ಮುಂಜಾಗ್ರತಾ ಕ್ರಮಗಳ ಕಡೆ ಗಮನ ಹರಿಸಲಾಗುತ್ತಿದೆ‌.‌ ಕಳೆದ ಒಂದು ವಾರದಿಂದಲೂ ಈ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಲೇ ಇದ್ದು, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅದೆಲ್ಲವನ್ನು ಮಾಡಲು ಮುಂದಾಗಿದೆ ಸರ್ಕಾರ. ಕೊರೊನಾ ಸಾಂಕ್ರಾಮಿಕ ವಾಗಿ ಹರಡುವುದರಿಂದ ಈಗಾಗಲೇ ಒಂದು ವಾರದ ಮಟ್ಟಿಗೆ ಕರ್ನಾಟಕ ಬಂದ್ ಮಾಡಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು. ಇದೇ ಕೊರೊನಾ ಹಿನ್ನೆಲೆಯಲ್ಲಿ ಈಗ ಮತ್ತೊಂದು ಪ್ರಮುಖ ನಿರ್ಧಾರವನ್ನು ತುಮಕೂರು ಜಿಲ್ಲಾಡಳಿತ ಮಾಡಿದೆ.

ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ನಡೆದಾಡುವ ದೇವರೆಂದೇ ಹೆಸರಾದ ಪೂಜ್ಯ ಶ್ರೀ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಜಯಂತಿಯನ್ನು ಬರುವ ಏಪ್ರಿಲ್ 5 ರಂದು ನಡೆಸಲು ಸಿದ್ಧಗಂಗಾ ಮಠದ ಆಡಳಿತ ಮಂಡಳಿಯು ನಿರ್ಧಾರವೊಂದನ್ನು ಮಾಡಿ, ಜಿಲ್ಲಾಡಳಿತದ ಅನುಮತಿಯನ್ನು ಕೋರಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ ಎಂದು, ಏಪ್ರಿಲ್ 5 ರಂದು ನಡೆಯಬೇಕಿದ್ದ ಶ್ರೀಗಳ ಜಯಂತಿ ಹಾಗೂ ಸ್ಮರಣಾ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಸದ್ಯಕ್ಕೆ ಬ್ರೇಕ್ ಹಾಕಿದೆಯೆಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿವರಾದ ವಿಶ್ವನಾಥಯ್ಯ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಶ್ರೀಗಳ ಜಯಂತಿ ನಡೆದರೆ ಅಸಂಖ್ಯಾತ ಭಕ್ತ ವೃಂದ ಒಂದೆಡೆ ಸೇರಲಿದೆ. ಆದರೆ ಕೊರೊನಾ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಯಾವುದೇ ಸಮಾರಂಭ ನಡೆಯದಂತೆ ನಿರ್ಬಂಧ ಹೇರಿದ್ದು, ತುಮಕೂರು ಜಿಲ್ಲಾಡಳಿತ ಕೂಡಾ ಅದೇ ಹಿನ್ನೆಲೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮಕ್ಕೆ ತಡೆ ಹಾಕಿದೆ. ಅಲ್ಲದೆ ಆ ಹೊತ್ತಿಗೆ ಕೊರೊನಾ ನಿಯಂತ್ರಣಕ್ಕೆ ಬಂದರೆ, ಪರಿಸ್ಥಿತಿ ಸುಧಾರಿಸದರೆ ಆಗ ಅನುಮತಿ ನೀಡಲಾಗುವುದು ಎಂದು ಕೂಡಾ ಜಿಲ್ಲಾಡಳಿತ ತಿಳಿಸಿದೆ ಎನ್ನಲಾಗಿದೆ. ಒಟ್ಟಾರೆ ಕೊರೊನಾ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳಲು ಸಾಕಷ್ಟು ಗಮನವನ್ನು ಎಲ್ಲೆಡೆ ನೀಡಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here