ಕೊರೊನಾ ವೈರಸ್ ನ ಧಾಳಿ ಅಷ್ಟು ಇಷ್ಟಿಲ್ಲ, ಯಾರನ್ನೂ ಬಿಡದಂತೆ ಹರಡುತ್ತಿದೆ ಈ ವೈರಸ್. ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಈ ವೈರಸ್ ಬಹಳ ಬೇಗ ಹರಡತೊಡಗಿತ್ತು. ಬಹುಶಃ ಮಾನವನ ರಕ್ತದ ರುಚಿಗೆ ಈ ವೈರಸ್ ಹಾತೊರೆಯುತ್ತಿದೆ ಎಂಬಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಸಾಗಿದೆ‌. ಮೊದಲಿಗೆ ಈ ವೈರಸ್ ಕಾಣಿಸಿಕೊಂಡ ಚೀನಾದ ವುಹಾನ್ ಇದೀಗ ಸ್ಮಶಾನ ಮೌನದಲ್ಲಿ ಮುಳುಗಿದೆ. ಈಗಾಗಲೇ ವೈರಸ್ ಪೀಡಿತರಾದವರಿಗೆ ಸೂಕ್ತ ಚಿಕಿತ್ಸೆಯನ್ನು ಕೂಡಾ ಒದಗಿಸುವ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಷ್ಟೇ ವೇಗದಲ್ಲಿ ರೋಗ ಕೂಡಾ ಭಯ ಹುಟ್ಟಿಸಿದೆ.

ಜಗತ್ತಿನಲ್ಲಿ ಕೊರೊನಾ ವೈರಸ್ ಒಟ್ಟು 79,000 ಜನರಿಗೆ ತಗುಲಿದೆ ಎನ್ನಲಾಗಿದೆ. ಅಲ್ಲದೇ ಈಗಾಗಲೇ ಈ ವೈರಸ್ ನ ಪರಿಣಾಮದಿಂದಾಗಿ 1.900 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಅನ್ನು ಏನೇ ಆಗಲಿ ನಿಯಂತ್ರಣ ಮಾಡುತ್ತೇನೆ ಎಂದು ಸಜ್ಜಾದ ಚೀನಾ ಹತ್ತೇ ದಿನಗಳಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಮಾಡಿ, ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಕೊರೊನಾಗೆ ಸವಾಲನ್ನು ಎಸೆಯಲು ಮುಂದಾದರೂ ಕೂಡಾ ಅದನ್ನು ಜಗ್ಗಿಸುವಲ್ಲಿ, ಮಣಿಸುವಲ್ಲಿ ಚೀನಾ ಇನ್ನೂ ಯಶಸ್ಸು ಪಡೆದಿಲ್ಲ.

ವಿಷಯ ಹೀಗಿರುವಾಗಲೇ ಒಂದು ಆಘಾತಕಾರಿ ಬೆಳವಣಿಗೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥನನ್ನೇ ಈ ವೈರಸ್ ಬಲಿ ತೆಗೆದುಕೊಂಡಿದೆ. ಕೊರೊನಾ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿದ್ದ ವುಚಾಂಗ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಲಿಯು ಜಿಮಿಂಗ್ ಅವರು ಇದೇ‌ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಯಾವ ವೈರಸ್ ವಿರುದ್ಧ ಹೋರಾಟ ನಡೆಸಲು ಆಸ್ಪತ್ರೆ ಸಜ್ಜಾಗಿತ್ತೋ ಅದೇ ವೈರಸ್ ಗೆ ಆಸ್ಪತ್ರೆಯ ಮುಖ್ಯಸ್ಥರು ಬಲಿಯಾಗಿರುವುದು ವಿಪರ್ಯಾಸ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here