ಪಶ್ಚಿಮ ಬಂಗಾಳದ ಡಂಕುಣಿ ಪ್ರದೇಶದ ವ್ಯಕ್ತಿಯೊಬ್ಬರು ತನ್ನ ಎರಡು ಹಸುಗಳನ್ನು ಕರೆದುಕೊಂಡು ಸ್ಥಳೀಯ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್‌ನ ಒಂದು ಶಾಖೆಯನ್ನು ತಲುಪಿದ್ದಾರೆ. ತಮ್ಮ ಹಸುಗಳ ಮೇಲೆ ಚಿನ್ನದ ಸಾಲ (ಗೋಲ್ಡ್ ಲೋನ್) ಪಡೆಯುವ ಆಸೆ ಆ ವ್ಯಕ್ತಿಯದು. ಇನ್ನು ಈ ವ್ಯಕ್ತಿ ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಲು ಕಾರಣವೇನೆಂದು ತಿಳಿದರೆ, ಸ್ಥಳೀಯ ಬಿಜೆಪಿ ಮುಖ್ಯಸ್ಥರೊಬ್ಬರು ನೀಡಿದ ಹೇಳಿಕೆ ಅದಕ್ಕೆ ಕಾರಣವಾಗಿದೆ ಎಂದರೆ ನಂಬಲೇ ಬೇಕು. ಬನ್ನಿ ಹಾಗಾದರೆ ಏನು ಈ ಘಟನೆಯ ಹಿನ್ನೆಲೆ ಎಂದು ತಿಳಿಯೋಣ. ಪಶ್ಚಿಮ ಬಂಗಾಳ ಡಿ.ಎನ್.ಎನ್. ಬಾಂಗ್ಲಾ ಎಂಬ ಸ್ಥಳೀಯ ಸುದ್ದಿ ವಾಹಿನಿ ಇದರ ಬಗ್ಗೆ ವರದಿ ಮಾಡಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥರಾದ ದಿಲೀಪ್ ಘೋಷ್ ಕೆಲವು ದಿನಗಳ ಹಿಂದೆ ಮಾತನಾಡುವ ಸಂದರ್ಭದಲ್ಲಿ ಭಾರತೀಯ ಹಸುಗಳ ಹಾಲಿನಲ್ಲಿ ಬಂಗಾರವಿದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.

ಈ ಹೇಳಿಕೆ ತೀವ್ರ ಚರ್ಚೆಗೆ ಕೂಡಾ ಕಾರಣವಾಗಿತ್ತು. ಆದರೆ ಬಿಜೆಪಿ ನಾಯಕರು ನೀಡಿದ ಈ ಹೇಳಿಕೆಯಿಂದ ಪ್ರೇರಿತರಾದ ರೈತನೊಬ್ಬನು ಗೋಲ್ಡ್ ಲೋನ್ ಪಡೆಯಲು ಮುಂದಾಗಿದ್ದು,” ನಾನು ಚಿನ್ನದ ಸಾಲಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ನನ್ನ ಹಸುಗಳನ್ನು ನನ್ನೊಂದಿಗೆ ತಂದಿದ್ದೇನೆ. ಹಸುವಿನ ಹಾಲಿನಲ್ಲಿ ಚಿನ್ನವಿದೆ ಎಂದು ಕೇಳಿದ್ದೆ, ನನ್ನ ಕುಟುಂಬವು ಈ ಹಸುಗಳ ಮೇಲೆ ಅವಲಂಬಿತವಾಗಿದ್ದು, ನನ್ನ ಬಳಿ 20 ಹಸುಗಳಿವೆ ಮತ್ತು ನಾನು ಸಾಲ ಪಡೆದರೆ, ನನ್ನ ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ” ಎಂದು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗರಲ್ಗಚಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಜ್ ಸಿಂಗ್ ಅವರು ದಿಲೀಪ್ ಘೋಷ್ ಅವರ ಅಭಿಪ್ರಾಯಗಳನ್ನು ತೀವ್ರವಾಗಿ ಟೀಕಿಸಿ, ಪ್ರತಿನಿತ್ಯ ಜನರು ಹಸುಗಳೊಡನೆ ಅವರ ಬಳಿಗೆ ಬಂದು, ತಮ್ಮ ಹಸುಗಳ ಮೇಲೆ ಎಷ್ಟು ಸಾಲವನ್ನು ಪಡೆಯಬಹುದು ಎಂದು ಕೇಳುತ್ತಾರೆ, ತಮ್ಮ ಹೇಳಿಕೆಯ ಮೂಲಕ ಇಂತಹ ಪರಿಸ್ಥಿತಿ ಸೃಷ್ಟಿಸಿರುವ ದಿಲೀಪ್ ಘೋಷ್ ಅವರಿಗೆ ನೊಬೆಲ್ ಬಹುಮಾನ ನೀಡಬೇಕು ಎಂದಿದ್ದಾರೆ ಮನೋಜ್ ಸಿಂಗ್ ಅವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here