ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದ್ದು, ವಿಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ವಿಡಿಯೋದ ವಿಶೇಷ ಏನೆಂದರೆ ಹಸುವೊಂದು ಟ್ರಾಫಿಕ್ ರೂಲ್ ಪಾಲಿಸುತ್ತಿರುವುದು. ಹೌದು ಇಂತಹ ಸಂದರ್ಭದಲ್ಲಿ ಒಂದು ಅಪರೂಪದ ವಿಡಿಯೋ ವನ್ನು ಪ್ರೀತಿ ಜಿಂಟಾ‌ ಶೇರ್ ಮಾಡಿದ್ದು, ಹಸುವನ್ನು ನೋಡಿದ ಜನರು ಪ್ರೀತಿ ಅವರ ಟ್ವೀಟ್ ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಯನ್ನು ಕೂಡಾ ನೀಡುತ್ತಾ ಸಾಗಿರುವುದು ಕೂಡಾ ಗಮನಾರ್ಹ ಎನಿಸಿದೆ.

ಪ್ರೀತಿ ಜಿಂಟಾ ಅವರು ಶೇರ್ ಮಾಡಿರುವ 9 ಸೆಕೆಂಡ್‍ ನ ವಿಡಿಯೋದಲ್ಲಿ ಸಿಗ್ನಲ್ ಬಿದ್ದಿರುವ ಕಡೆ, ಹಸು ಟ್ರಾಫಿಕ್ ಸಿಗ್ನಲ್‍ನಲ್ಲಿ ಬೇರೆ ವಾಹನಗಳ ಜೊತೆ ರಸ್ತೆಯಲ್ಲಿ ತಾನೂ ಕೂಡ ನಿಂತು ಕೊಂಡಿದೆ. ಪ್ರೀತಿ ಜಿಂಟಾ ಅವರು ಇದರ ಬಗ್ಗೆ ಟ್ರಾಫಿಕ್ ರೂಲ್ ಫಾಲೋ ಮಾಡುವುದನ್ನು ಇದನ್ನು ನೋಡಿ ಕಲಿಯಿರಿ, ಜನರ ಬಗ್ಗೆ ಮರೆತು ಬಿಡಿ. ನಮ್ಮ ಪ್ರಾಣಿಗಳು ಸಹ ಟ್ರಾಫಿಕ್ ನಿಯಮವನ್ನು ಪಾಲಿಸುತ್ತದೆ. ನನ್ನ ಮಾತಲ್ಲಿ ನಂಬಿಕೆ ಇಲ್ಲದಿದ್ದರೆ, ಈ ವಿಡಿಯೋ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಆದ ಈ ವಿಡಿಯೋವನ್ನು ಈಗಾಗಲೇ 57 ಸಾವಿರ ಜನ ವೀಕ್ಷಣೆ ಮಾಡಿದ್ದು, ಅದನ್ನು ಮೆಚ್ಚಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಸು ಟ್ರಾಫಿಕ್ ನಿಯಮಗಳನ್ನು ಚೆನ್ನಾಗಿ ತಿಳಿದಿದೆ ‌ಎಂದರೆ, ಮತ್ತೆ ಕೆಲವರು ಅಲ್ಲಿ ರಸ್ತೆಯಲ್ಲಿ ಇರುವ ಕೆಲವರಿಗಿಂತ ಹಸುವಿಗೆ ನಿಯಮಗಳು ಚೆನ್ನಾಗಿ ತಿಳಿದಿದೆ ಎಂದೂ, ಇನ್ನೂ ಕೆಲವರು ಹಸುಗಳು ರಸ್ತೆಯಲ್ಲಿ ಜನರಿಗೆ ತೊಂದರೆ‌‌ ಕೊಟ್ಟಿರುವ ವಿಡಿಯೋ ಗಳನ್ನು ಕೂಡಾ ಶೇರ್ ಮಾಡುತ್ತಾ‌ ಸಾಗಿದ್ದಾರೆ. ಒಟ್ಟಾರೆ ಬಹುತೇಕ ಮೆಚ್ಚುಗೆಗಳೇ ಅಧಿಕವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here