ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ಆತ್ಮೀಯರಿಗೆ ವಿವಾಹದ ಕರೆಯೋಲೆ ನೀಡುತ್ತಿರುವ ರವಿಚಂದ್ರನ್ ಅವರು , ಮತ್ತೊಂದೆಡೆ ಮದುವೆಯ ಸಿದ್ಧತೆಯ ಕಡೆ ಕೂಡಾ ಗಮನವಹಿಸಿದ್ದಾರೆ. ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲಿದ್ದಾರೆ ಕನಸುಗಾರ ರವಿಚಂದ್ರನ್ ಅವರು. ಮದುವೆಯ ಎರಡು ದಿನದ ಕಾರ್ಯಕ್ರಮಗಳು ಅಂದರೆ ಮೊದಲ ದಿನ ರಿಸೆಪ್ಷನ್ , ಎರಡನೇ ದಿನ ಮದುವೆ ಶಾಸ್ತ್ರ ನಡೆಯಲಿದ್ದು ಸುಮಾರು 40 ಕ್ಯಾಮೆರಾ ಸೆಟಪ್ , ಹತ್ತು ಸಾವಿರ ಜನ ಆರಾಮವಾಗಿ ಕುಳಿತು ಮದುವೆ ನೋಡಲು ಸೋಫಾ ಹಾಕಿಸಿ ವ್ಯವಸ್ಥೆ ಮಾಡಿಸಿದ್ದಾರಂತೆ. ಇದಕ್ಕೆ ಮತ್ತಷ್ಟು ಮೆರುಗು ನೀಡಲು ಹಂಸಲೇಖ ಅವರ ಸಂಗೀತ ಕಾರ್ಯಕ್ರಮ ಇದೆಯಂತೆ.

ಇನ್ನು ಚಿತ್ರ ನಟ ನಟಿಯರ ದೊಡ್ಡ ದಂಡೇ ಇಲ್ಲಿ ಇರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಮೇ 28 ಹಾಗೂ 29 ರಂದು ವಿವಾಹ ನಡೆಯಲಿದ್ದು, ಮೇ 30 ಕ್ಕೆ ರವಿಚಂದ್ರನ್ ಅವರ ಹುಟ್ಟು ಹಬ್ಬ ಇದೆ. ಒಂದು ಕಡೆ ಮಗಳ ವಿವಾಹ , ಇನ್ನೊಂದು ಕಡೆ ಅವರ ಹುಟ್ಟು ಹಬ್ಬ . ಅಲ್ಲದೆ ಮಗಳ ವಿವಾಹ ಸಂತಸದ ವಿಷಯವಾದರೆ, ಇನ್ನೊಂದೆಡೆ ಮಗಳು ಗಂಡನ ಮನೆಗೆ ಹೋಗುವಳೆಂಬ ದುಃಖ ಒಬ್ಬ ತಂದೆಗೆ ಸಹಜವಾಗಿಯೇ ಇರುತ್ತದೆ. ರವಿಚಂದ್ರನ್ ಅವರು ಕೂಡಾ ಇದಕ್ಕೆ ಹೊರತಾಗಿಲ್ಲ. ಅದಕ್ಕಾಗಿಯೇ ತಮ್ಮ ಭಾವನೆಗಳಿಗೆ ಒಂದು ರೂಪ ಕೊಟ್ಟು ಮಗಳಿಗಾಗಿ ಒಂದು ಹಾಡನ್ನು ಅವರು ಬರೆದಿದ್ದಾರೆ.

ಕಿರುತೆರೆಯಲ್ಲಿ ರವಿಚಂದ್ರನ್ ಅವರು ತೀರ್ಪುಗಾರರಾಗಿರುವ ತಕಧಿಮಿತ ಕಾರ್ಯಕ್ರಮದಲ್ಲಿ ಈ ಹಿಂದೆ ಒಮ್ಮೆ ತಮ್ಮ ಮಗಳಿಗೆ ಮದುವೆ ಉಡುಗೊರೆಯಾಗಿ ಕೊಡಲಿರುವ ಹಾಡನ್ನು ಅವರು ಹಾಡಿದ್ದರು. ಮಗಳಿಗಾಗಿ ಅವರು ಕೊಡುತ್ತಿರುವ ವಿಶೇಷ ಉಡುಗೊರೆ ಇದಾಗಿದೆ. ಮಗಳ ವಿವಾಹವನ್ನು ಒಂದು ಕನಸಿಗೆ ರೂಪು ಕೊಟ್ಟಂತೆ ಮಾಡುತ್ತಿದ್ದಾರೆ ಕ್ರೇಜಿಸ್ಟಾರ್. ತ್ರೀಡಿ ಆಮಂತ್ರಣ ಪತ್ರ ಆತ್ಮೀಯರ ಕೈ ಸೇರಿದ್ದು, ಅರಮನೆ ಮೈದಾನದಲ್ಲಿ ಅವರ ಮಗಳ ವಿವಾಹ ಮಹೋತ್ಸವ ರಂಗ ರಂಗ ವೈಭವದಿಂದ ನಡೆಯಲಿದೆ. ನಿಜಕ್ಕೂ ಕ್ರೇಜಿಸ್ಟಾರ್ ಗೆ ಮಗಳ ಮೇಲಿರುವ ಪ್ರೀತಿಯನ್ನು ಬೆಲೆ ಕಟ್ಟಲಾಗದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here