ಖಾತೆ ಹಂಚಿಕೆ ಬಗ್ಗೆ ಸಿ.ಟಿ ರವಿ ಅಸಮಾಧಾನದ ಕುರಿತು ಬರುತ್ತಿರುವ ಸುದ್ದಿಗಳ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಕೆಲ ಮಾಧ್ಯಮಗಳು ಅನಗತ್ಯವಾಗಿ ನನ್ನ ಪಕ್ಷ ನಿಷ್ಠೆಯ ಬಗ್ಗೆ ಸಂಶಯ ವ್ಯಕ್ತಪಡಿಸಿವೆ ಎಂದು ಸಿಟಿ ರವಿ ಹೇಳಿದ್ದಾರೆ. ಸಚಿವ ಸ್ಥಾನವನ್ನೇ ಕೇಳದವನು ಖಾತೆಗೆ ಯಾಕೆ ಕ್ಯಾತೆ ತೆಗೆಯುತ್ತೇನೆ? ಬಿಜೆಪಿ ನನಗೆ ಸಾಕಷ್ಟು ಹುದ್ದೆ ನೀಡಿದೆ, ಪಂಚಾಯತಿ ಸದಸ್ಯರೂ ಇಲ್ಲದ ಕುಟುಂಬದ ನನಗೆ ನಾಲ್ಕು ಬಾರಿ ಶಾಸಕನನ್ನಾಗಿ ಮಾಡಿದೆ. ನನ್ನ ನಿಷ್ಠೆ ಕೇವಲ ಬಿಜೆಪಿಗೆ ಎಂದು ಅವರು ಹೇಳಿದ್ದಾರೆ.ಪಕ್ಷ ನಿಷ್ಠೆ ಮತ್ತು ಸಿದ್ದಾಂತಗಳ ನಡುವೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ.

ನಾನಿದ್ದರೂ ಬಿಜೆಪಿ, ಸತ್ತರೂ ಬಿಜೆಪಿ. ಅಧಿಕಾರದ, ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದಾಗ ಅದೇ ನನ್ನ ಕೊನೆಯ ದಿನ ಎಂದು ಸಿಟಿ ರವಿ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ c.t. ರವಿ ಅವರು ಸಚಿವ ಸ್ಥಾನ ನಾನು ಕೇಳಿರಲಿಲ್ಲ ಜೊತೆಗೆ ಇಂತಹದೇ ಖಾತೆ ಕೊಡಿ ಎಂದು ಕೇಳಿರಲಿಲ್ಲ ಆದರೂ ನನಗೆ ಆಗಿರುವ ಅಸಮಾಧಾನ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ.

ಸೂಕ್ತ ಸಮಯದಲ್ಲಿ ನನ್ನ ಅನಿಸಿಕೆ ತಿಳಿಸುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಿ ಟಿ ರವಿ ತಿಳಿಸಿದ್ದಾರೆ. ನೆನ್ನೆ ಖಾಸಗಿ ಮಾಧ್ಯಮದ ಜೊತೆ ಖಾತೆ ಹಂಚಿಕೆ ಮಾಡಿದ್ದರ ಬಗ್ಗೆ ಸಿ ಟಿ ರವಿ ಹೇಳಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here