ಮುಂಬೈನಲ್ಲಿ ತಂಗಿರುವ ಶಾಸಕರನ್ನು ಯಾವುದೇ ತೊಂದರೆಯಾದರೂ ಸರಿ ಮಾತನಾಡಿಸಿಕೊಂಡು ಕರೆದುಕೊಂಡು ಬಂದುಬಿಡಿ ಎಂದು ಡಿ ಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈಗೆ ಅತೃಪ್ತ ಶಾಸಕರ‌ ಮನವೊಲಿಸಿ ಕರೆತರಲು ಹೋದ ಶಾಸಕ ಶಿವಲಿಂಗೇ ಗೌಡ ಅವರು ಗರಂ ಆಗಿದ್ದಾರೆ. ಅವರು ಮುಂಬೈನ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿರುವ ರಾಜೀನಾಮೆ ನೀಡಿದ ಶಾಸಕರನ್ನು ಭೇಟಿ ಮಾಡಲು ಹೋದಾಗ, ಶಿವಲಿಂಗೇಗೌಡರನ್ನು ತಡೆದಿದ್ದಾರೆ ಪೊಲೀಸರು. ಆಗ ಗರಂ ಆದ ಶಿವಲಿಂಗೇ ಗೌಡರು ಇದೇನು ಬಿಜೆಪಿಯ ಹೋಟಲಾ, ನಾವು ಇಲ್ಲಿ ಕಿಡ್ನಾಪ್ ಆಗಲಿ, ದರೋಡೆ ಆಗಲಿ ಮಾಡಲಿ ಬಂದಿಲ್ಲ. ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಹೊಟೇಲ್ ನ ಗೇಟಿನ ಮುಂಭಾಗದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ನಾವು ಬಂದಿರುವುದು ಶಾಸಕರನ್ನು ಭೇಟಿ ಮಾಡುವುದಕ್ಕೆ, ಬಿಜೆಪಿ ನಮ್ಮ ಶಾಸಕರನ್ನು ಬಂಧನದಲ್ಲಿಟ್ಟಿದೆ. ಅದರ ಬಗ್ಗೆ ನಮ್ಮ‌ಶಾಸಕರು ನಮಗೆ ತಿಳಿಸಿದ್ದು, ಅದಕ್ಕಾಗಿ ನಾವು ಇಲ್ಲಿಗೆ ಬಂದಿರುವುದಾಗಿ ಅವರು ಹೇಳಿದ್ದಾರೆ. ಇದೊಂದು ಖಾಸಗಿ ಹೊಟೇಲ್. ಆದರೆ ಎಂಎಲ್ ಎ ಗಳು ಬರಬೇಡಿ ಅನ್ನೋಕೆ ಕಾರಣವೇನು? ನಾವು ಯಾರನ್ನಾದರೂ ಕಿಡ್ನಾಪ್ ಮಾಡಿದರೆ ಆಗ ಪೋಲಿಸರ ಪ್ರವೇಶವಾಗಬೇಕು.‌ ಆದರೆ ಅವರೇಕೆ ನಮ್ಮನ್ನು ಒಳಗೆ ಹೋಗಲು ಕೂಡಾ ಬಿಡುತ್ತಿಲ್ಲ ಎಂದು ಅವರು ಪೋಲಿಸರ ವಿರುದ್ಧ ಗರಂ‌ ಆಗಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ರಾತ್ರಿ ಬಿಜೆಪಿಯವರು ಶಾಸಕರನ್ನು ಬಂದು ಭೇಟಿ ಮಾಡಿ ಹೋಗಿದ್ದಾರೆ. ಈಗ ನಾವು ನಮ್ಮ‌ ಶಾಸಕರನ್ನು ಭೇಟಿಯಾಗಿ ಅವರನ್ನು ಬಿಜೆಪಿಯವರು ಬಂಧನದಲ್ಲಿ ಇಟ್ಟಿರುವರೋ ಅಥವಾ ಸ್ವತಂತ್ರವಾಗಿ ಇರುವರೋ ಎಂಬುವುದನ್ನು ತಿಳಿಯಬೇಕಾಗಿದೆ. ಬಿಜೆಪಿಯವರು ನಮ್ಮ‌ ಶಾಸಕರನ್ನು ಬಲವಂತವಾಗಿ ಎಳೆ ತಂದಿದ್ದಾರೆ ಎಂದು ಅವರು ದೂರುತ್ತಾ, ನಾವು ನಮ್ಮ ಶಾಸಕರ ರಕ್ಷಣೆಗಾಗಿ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡಾ ಮುಂಬೈ ತಲುಪಿ ಶಾಸಕರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here