ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಂದಿನ ಈ ಪರಿಸ್ಥಿತಿಗೆ ಕಾರಣ ಮೈಲಾರ ಲಿಂಗಶ್ವೇರನ ಶಾಪ ಎಂದಿದ್ದಾರೆ. ಮೈಲಾರ ಲಿಂಗೇಶ್ವರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು. ಕೊಂಕಣ ಸುತ್ತಿ ಮೈಲಾರಕ್ಕೆ ಬರದೆ ಅವರು ಹೆಲಿಕಾಪ್ಟರ್ ನಲ್ಲಿ ಬಂದುದಕ್ಕೆ ಇಂದು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪುಣ್ಯ ಕ್ಷೇತ್ರ ಮೈಲಾರದ ಮೈಲಾರ ಲಿಂಗೇಶ್ವರನ ದೇವಾಲಯದ ವತಿಯಿಂದ ಕಾರ್ಣಿಕ ಭವಿಷ್ಯ ವಾಣಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಭವಿಷ್ಯ ವಾಣಿ ಡೆಂಕಣಮರಡಿ ಎನ್ನುವ ಸ್ಥಳದಲ್ಲಿ ನಡೆಯುವುದು ಸಂಪ್ರದಾಯ.

ಬಹಳ ಕಟ್ಟು ನಿಟ್ಟಿನಿಂದ, ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಣಿಕ ಭವಿಷ್ಯ ವಾಣಿಯ ಬಗ್ಗೆ ಜನರಲ್ಲಿ ಅಪಾರ ನಂಬಿಕೆಯಿದೆ. ಈ ಭವಿಷ್ಯವಾಣಿ ಕಾರ್ಯಕ್ರಮವನ್ನು ನೋಡಲು 2018 ರಲ್ಲಿ ಡಿ.ಕೆ.ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರಿದ್ದ ಹೆಲಿಕಾಪ್ಟರ್​ ಮೈಲಾರಲಿಂಗೇಶ್ವರ ಸ್ವಾಮಿಯ ಆಲಯ ಹಾಗೂ ಕಾರ್ಣಿಕ ನುಡಿಯುವ ಡೆಂಕಣಮರಡಿ ಕ್ಷೇತ್ರದ ಮೇಲೆ ಹಾರಾಡಿದೆ. ಈ ಅಪಚಾರವಾದ ಕಾರಣದಿಂದಲೇ ಡಿ.ಕೆ. ಶಿವಕುಮಾರ್​ ಅವರಿಗೆ ಈಗ ಸಂಕಷ್ಟ ಎದುರಾಗಿದೆ ಎಂದು ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

ಈ ಹಿಂದೆ 2008 ರಲ್ಲಿ ಮಾಜಿ ಸಚಿವರಾದ ಜನಾರ್ಧನ ರೆಡ್ಡಿಯವರು ಕೂಡಾ ಕ್ಷೇತ್ರಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದು ಹೋಗಿದ್ದರು. ಅನಂತರ ಅವರು ಕೂಡಾ ಸಾಕಷ್ಟು ಸಂಕಷ್ಟಗಳನ್ನು, ನೋವು, ಅವಮಾನಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ ಧರ್ಮದರ್ಶಿಗಳು. ಈಗ ಡಿ.ಕೆ.ಶಿವಕುಮಾರ್ ಅವರು ಕೂಡಾ ಆದಷ್ಟು ಬೇಗ ಆಲಯಕ್ಕೆ ಬಂದು, ತಪ್ಪು ಕಾಣಿಕೆಯನ್ನು ನೀಡಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಒಳ್ಳೆಯದೆಂದು, ಅದೇ ಪರಿಹಾರ ಮಾರ್ಗವೆಂದು ಧರ್ಮದರ್ಶಿಗಳ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here