ರಾಮ ಜನ್ಮಭೂಮಿ ಅಯೋಧ್ಯೆ ಯಾರ ಆಸ್ತಿಯೂ ಅಲ್ಲ ಎಂದು ಹೇಳಿದ್ದಾರೆ‌ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು. ಕಲಬುರಗಿಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ಪೀಠದಲ್ಲಿ ಇಂದು ಅವರು ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಿದ್ದಾರೆ. ಈ ಕಾರ್ಯಕ್ರಮಗಳ ನಂತರ ಅವರು ಮಾದ್ಯಮಗಳ ಮುಂದೆ ಮಾತನಾಡುತ್ತಾ ರಾಮ ಮಂದಿನ ನಿರ್ಮಾಣದ ಕ್ರೆಡಿಟ್ ಯಾವುದೇ ಜಾತಿ, ಧರ್ಮದ್ದು ಅಥವಾ ಪಕ್ಷದಲ್ಲ ಇದರ ಕ್ರೆಡಿಟ್ ಎಲ್ಲರಿಗೂ ಸೇರಬೇಕು ಎಂದಿದ್ದಾರೆ.

ರಾಮ ನಾಮವನ್ನು ಜಪ ಮಾಡಿದ್ದೇ ನಾವು, ಮಹಾತ್ಮ ಗಾಂಧೀಜಿಯವರು ತಮ್ಮ ಕೊನೆ ಘಳಿಗೆಯಲ್ಲಿ ಹೇ ರಾಮ್ ಎಂದಿದ್ದಾರೆ.

ನಾಳೆ ನಾನು ಕೂಡಾ ಟಿವಿ ಮುಂದೆ ಕುಳಿತು ರಾಮ ನಾಮ ಜಪಿಸುವುದಾಗಿ ಅವರು ಹೇಳಿದ್ದಾರೆ. ಇನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರಿಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರ ತಿಳಿದು ಬಂದಿದೆ.

ಅವರು ಚಾಮುಂಡೇಶ್ವರಿ ಮತ್ತು ದತ್ತಾತ್ರೇಯ ದೇವರ ಕೃಪೆಯಿಂದ ಹಾಗೂ ನಾಡಿದ ಎಲ್ಲಾ ಜನರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರು ಪ್ರಾರ್ಥನೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡಾ ಬೇಗ ಗುಣಮುಖರಾಗಲಿ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here