ಒಂದು ತಿಂಗಳು ರಜೆ ಪಡೆದು ಊರಿಗೆ ಬಂದಿದ್ದ ಗುರು ಅವರು ರಜೆ ಮುಗಿಸಿ ಕಳೆದ ಭಾನುವಾರವಷ್ಟೇ (ಫೆ.10) ಕರ್ತವ್ಯಕ್ಕೆ ತೆರಳಿದ್ದರು. ತವರಿನಿಂದ ಹೋದ ನಾಲ್ಕೇ ದಿನಕ್ಕೆ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಸಾಯುವ ಮುನ್ನ ತಾಯಿಯೊಂದಿಗೆ ಮಾತನಾಡಿದ್ದರು. ನಿತ್ಯ ಎರಡು ಮೂರು ಬಾರಿ ಮನೆಗೆ ಫೋನ್ ಕರೆ ಮಾಡುತ್ತಿದ್ದ ಗುರು ಅವರು ಗುರುವಾರ ಮಧ್ಯಾಹ್ನ 12ರ ಸಮಯದಲ್ಲಿ ಫೋನ್ ಕರೆ ಮಾಡಿ ತಾಯಿಯೊಂದಿಗೆ ಮಾತನಾಡಿದ್ದರು.
ಗುರು ಅವರು ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿದ್ದರು. ಗೃಪ್ರವೇಶವಾಗಿ ಸುಮಾರು ಒಂದು ವರ್ಷವಾಗಿತ್ತು. ಗೃಹ ಪ್ರವೇಶದ ನಂತರ ಮದುವೆಯಾಗಿದ್ದರು.

ಪ್ರತಿನಿತ್ಯ ಸಂಜೆ ಫೋನ್ ಮಾಡುತ್ತಿದ್ದ ಪತಿ ಇಂದು ಫೋನ್ ಮಾಡದಿದ್ದಾಗ ಕಲಾವತಿ ಅವರು ತಾವೇ ಫೋನ್ ಮಾಡಿದ್ದಾರೆ. ಆ ವೇಳೆ ಪತಿ ಗುರು ಮೃತಪಟ್ಟಿರುವುದು ಕಲಾವತಿ ಅವರಿಗೆ ಗೊತ್ತಾಗಿದೆ.
ವರ್ಷದ ಹಿಂದಷ್ಟೇ ಜಮ್ಮು-ಕಾಶ್ಮೀರಕ್ಕೆ ಗುರು ನಿಯೋಜನೆಗೊಂಡು 82 ಬೆಟಾಲಿಯನ್ ನಲ್ಲಿ ಸಿಟಿ/ಜಿಡಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2018 ರ ಏಪ್ರಿಲ್‌ನಲ್ಲಿ ಸೋದರ ಮಾವನ ಮಗಳು, ಕನಕಪುರ ಸಮೀಪದ ಸಾಸಲಾಪುರ ಗ್ರಾಮದ ಕಲಾವತಿ ಅವರನ್ನು ವಿವಾಹವಾಗಿದ್ದರು.

ಮದ್ದೂರು ತಾಲ್ಲೂಕು ಭಾರತೀನಗರ ದಿವ್ಯಜ್ಯೋತಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಾಲಾ ವ್ಯಾಸಂಗ, ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಶ್ರೀರಂಗಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎಸ್ಎಸ್ಎಲ್ಸಿ ಆಧಾರದ ಮೇಲೆ 2-8 ವರ್ಷಗಳ ಹಿಂದೆ ಸಿ.ಆರ್.ಪಿ.ಎಫ್. ಮೂಲಕ ಮಿಲಿಟರಿ ಸೇರಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here