ದಿಯಾ ಮತ್ತು ಲವ್ ಮಾಕ್ಟೇಲ್ ಸಿನಿಮಾಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಈ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದಾಗ ಆರಂಭದಲ್ಲಿ ಗಳಿಕೆ ನೀರಸವಾಗಿತ್ತು. ಆದರೆ ಎರಡನೇ ವಾರಕ್ಕೆ ಈ ಸಿನಿಮಾಗಳ ಬಗ್ಗೆ ಮೆಚ್ಚುಗೆ ಬಂದ ಕೂಡಲೇ ಯಶಸ್ವಿಯಾಗಿ ಪ್ರದರ್ಶನ ಕಂಡವು. ಅದಾದ ನಂತರ ಓಟಿಟಿ ಫ್ಲಾಟ್ ಫಾರ್ಮ್ ಗೆ ಬಂದವು ಈ ಸಿನಿಮಾಗಳು, ಆಗಂತೂ ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ನೋಡದ ಮಂದಿಯೆಲ್ಲಾ ಈಗ ನೋಡಿ, ಸಿನಿಮಾ ಬಗ್ಗೆ ಪ್ರಶಂಸೆಯ ಮಳೆಯನ್ನೇ ಸುರಿಸುತ್ತಿದ್ದು, ಸಿನಿಮಾಗಳ ಮರು ಬಿಡುಗಡೆ ಆಗಬೇಕೆಂದು ಕೋರಿದ್ದಾರೆ.

ಅಲ್ಲದೆ ಸಿನಿಮಾ ನೋಡಿದ ಅನೇಕರು ಲವ್ ಮಾಕ್ಟೇಲ್ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರೂ ಆಗಿರುವ ಡಾರ್ಲಿಂಗ್ ಕೃಷ್ಣ ಅವರಿಗೆ ಸಂದೇಶಗಳನ್ನು ಕಳುಹಿಸಿ ಸಿನಿಮಾ ಮಂದಿರಗಳಲ್ಲಿ ನೋಡದೆ ಇದ್ದುದ್ದಕ್ಕೆ ಸಾಕಷ್ಟು ಬೇಸರವಾಗಿದೆ ಎಂದೂ, ಸಿನಿಮಾ ಟಿಕೆಟ್ ಬೆಲೆಯನ್ನು ನೀಡಲು ಬಯಸುವುದಾಗಿ ಕೂಡಾ ಮನವಿ ಮಾಡಿದ್ದಾರೆ. ಅನೇಕರು ಹೀಗೆ ಮನವಿಯನ್ನು ಮಾಡಿದ್ದರಿಂದ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಇನ್ಸ್ಟಾಗ್ರಾಂ ನ ಅಧಿಕೃತ ಖಾತೆಯಲ್ಲಿ ತಮ್ಮ ಯುಪಿಐ ಐಡಿ ಹಂಚಿಕೊಂಡು, ಅದಕ್ಕೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ನಟ ಅರು ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ಅಭಿಯಾನವನ್ನು ಆರಂಭ ಮಾಡಿದ್ದಾರೆ. ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ” ಯಾರೆಲ್ಲ ಚಿತ್ರಮಂದಿರದಲ್ಲಿ ಈ ಚಿತ್ರಗಳನ್ನು ನೋಡದೆ ಸಾಮಾಜಿಕ ಜಾಲತಾಣದಲ್ಲಿ ನೋಡಿ, ಹೋಗಳಿದ್ದಿರೋ, ಖುಷಿಪಟ್ಟಿದ್ದೀರೋ, ಈ ಸಿನಿಮಾಗಳ ಬಗ್ಗೆ ಅದೇ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೊಳ್ಳೆ ಮಾತುಗಳನ್ನು ಅಡುತ್ತಿದ್ದೀರೋ, ಅವರೆಲ್ಲರೂ ಬರೀ 100 ರೂಪಾಯಿಯನ್ನು or more than that ನಿರ್ಮಾಪಕರ ಖಾತೆಗೆ ಹಾಕಿ, ಆಗ ನೀವು ಆ ಸಿನಿಮಾ ಮೇಲೆ ತೋರೋ ಪ್ರೀತಿ ಸರಿ ಹೋಗಿ, ಆ ಚಿತ್ರ ನಿರ್ಮಾಪಕ ಮತ್ತೊಂದು ಚಿತ್ರಕ್ಕೆ ಅಣಿಯಾಗುತ್ತಾನೆ ಎಂದು ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here