ಮುನಿರತ್ನ ಅವರ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶತ ದಿನೋತ್ಸವ ಸಮಾರಂಭವನ್ನು ಶುಕ್ರವಾರ ಜೆಪಿ ಪಾರ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದ ನಟ ಅಭಿಷೇಕ್ ಅಂಬರೀಶ್ ಅವರು ನನ್ನ ಕುಟುಂಬದವರಿಗೆಲ್ಲಾ ದರ್ಶನ್ ಅವರ ಜೊತೆ ನಟಿಸಲು ಅವಕಾಶ ಕೊಟ್ಟಿರಿ, ನನಗೇಕೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಆ ಪ್ರಶ್ನೆಗೆ ನಿರ್ಮಾಪಕ ಮುನಿರತ್ನ ಅವರು ಅದೇ ವೇದಿಕೆಯ ಮೇಲೆ ಉತ್ತರವನ್ನು ಕೂಡಾ ನೀಡಿದರು. ಈ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಆಯೋಜನೆಯಾಗಿತ್ತು.

ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು, ಸಚಿವ ಭೈರತಿ ಬಸವರಾಜ್, ನಟ ದರ್ಶನ್ ಅವರು, ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕರಾದ ಹರಿಕೃಷ್ಣ, ನಟರಾದ ರಮೇಶ್ ಭಟ್, ರವಿಶಂಕರ್ , ಶ್ರೀನಿವಾಸ ಮೂರ್ತಿ ಇತರರು ಭಾಗವಹಿಸಿದ್ದರು‌. ರಾಜಕೀಯ ಹಾಗೂ ಚಿತ್ರರಂಗದ ಗಣ್ಯರನೇಕ ಅಲ್ಲಿ ಉಪಸ್ಥಿತರಾಗಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಅಭಿಷೇಕ್ ಅವರು ಮುನಿರತ್ನ ಅವರು ನನ್ನ ಅಪ್ಪ, ಅಮ್ಮ ಇಬ್ಬರಿಗೂ ದರ್ಶನ್ ಜೊತೆ ನಟಿಸುವ ಚಾನ್ಸ್ ಕೊಟ್ಟಿದ್ದಾರೆ. ಆದರೆ ನನ್ನ ಯಾಕೆ ಬಿಟ್ರಿ ಎಂದು ಕೇಳಿದ್ದಾರೆ.

ಆಗ ಅದಕ್ಕೆ ಉತ್ತರಿಸಿದ ಮುನಿರತ್ನ ಅವರು ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಜರ್ ಅಭಿನಂದನ್ ಸಿನಿಮಾವನ್ನು ಮಾಡುತ್ತೇನೆ‌, ಆ ಸಿನಿಮಾದಲ್ಲಿ ಅಭಿಷೇಕ್ ಅವರಿಗೂ ಅವಕಾಶ ನೀಡುತ್ತೇನೆ ಎಂದು ತಮ್ಮ ಹೊಸ ಸಿನಿಮಾದಲ್ಲಿ ಅಭಿಷೇಕ್ ಅವರು ಇರುತ್ತಾರೆ ಎಂದು ಘೋಷಣೆ ಮಾಡಿದರು‌. ಅವರು ಹೇಳಿದಂತೆ ಎಲ್ಲಾ ಸಮರ್ಪಕವಾಗಿ ನಡೆದರೆ ಮುಂಬರುವ ಮೇಜರ್ ಅಭಿನಂದನ್ ಸಿನಿಮಾದಲ್ಲಿ ದರ್ಶನ್ ಮತ್ತು ಅಭಿಷೇಕ್ ಇಬ್ಬರನ್ನೂ ತೆರೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here