ಮಂಡ್ಯ ರೈತರ ಸಮಸ್ಯೆಗಳನ್ನು ಪರಿಹರಿಸಲು, ಅವರ ಕಣ್ಣೀರು ಒರೆಸಲಯ ಜೋಡೆತ್ತುಗಳು ಬರಬೇಕಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು. ನೆಲಮಂಗಲದಲ್ಲಿ ನಾತನಾಡಿರುವ ಅವರು ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕುಮಾರ ಸ್ವಾಮಿ ಅವರ ಕೈ ಬಿಡಬೇಡಿ ಎಂದು ನಾವು ಕೇಳಿಕೊಂಡೆವು. ಆದರೆ ಒಂದು ವರ್ಗದ ಜನರು ಮಾತ್ರ ಸ್ವಾಭಿಮಾನಕ್ಕೆ ಮತ ನೀಡಬೇಕು ಎಂಬ ಆಲೋಚನೆಯಿಂದ ಸುಮಲತ ಅವರನ್ನು ಗೆಲ್ಲಿಸಿದರು. ಈಗ ಜೋಡೆತ್ತುಗಳು ಕೂಡಾ ನಾಪತ್ತೆಯಾಗಿವೆ ಎಂದು ಅವರು ವಾಗ್ದಾಳಿಯನ್ನು ನಡೆಸಿದೆ‌.

ಮಂಡ್ಯದಲ್ಲಿ ರೈತರ ಕಬ್ಬು ಕಟಾವು ಆಗದೆ ಅವಕ್ಕೆ ಬೆಂಕಿ ಹಚ್ಚುವ ಪರಿಸ್ಥಿತಿ ಎದುರಾಗಿದೆ. ಚುನಾವಣೆಯ ನಂತರ ಜೋಡೆತ್ತುಗಳು ಮಂಡ್ಯದ ಉದ್ದಗಲಕ್ಕೂ ಬಂದು, ಮಂಡ್ಯದ ಜನತೆಗೆ ನಾವಿದ್ದೇವೆ ಎಂದು ಹೇಳಿದ್ದರು. ಈಗ ಸಂಸದರನ್ನು ಇಲ್ಲಿಗೆ ಕರೆದುಕೊಂಡು ಬಂದು, ರೈತರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಲಿ, ಡಿಸಿ ಕಛೇರಿ ಎದುರು ಧರಣಿ ಕೂರಲಿ, ಆ ಮೂಒಕ ರೈತರ ಹೋರಾಟಕ್ಕೆ ಅವರು ಕೂಡಾ ತಮ್ಮ ದನಿ ಗೂಡಿಸಲಿ ಎಂದು ಶಿವರಾಮೇಗೌಡರು ಹೇಳಿದ್ದಾರೆ.ಇದೇ ಸಂದರ್ಧದಲ್ಲಿ ಅವರು ಮಾತನಾಡುತ್ತಾ, ಜನರು ಅವರ ಸ್ವಾಭಿಮಾನಕ್ಕಾಗಿ ಓಟು ಹಾಕಿದ್ದಾರೆ.

ಚುನಾವಣೆಯ ನಂತರ ಸುಮಲತ ಅವರು ಮಂಡ್ಯದಲ್ಲಿ ಇರುತ್ತಾರೆ ಎಂದು ಕೊಂಡಿದ್ದೆವು. ಆದರೆ ಇಂದು ರೈತರೂ ಸತ್ತರೂ, ಗೋಳಾಡಿದರೂ ಕೂಡಾ ಅವರಿಲ್ಲ‌. ಜೋಡೆತ್ತುಗಳನ್ನು ಮತ್ತು ಸಂಸದರನ್ನು ಹುಡುಕುವಂತಹ ಪರಿಸ್ಥಿತಿ ಇಂದು ಇದೆ. ರಾಜಕೀಯ ಸಾಕು ರೈತರ ಸಮಸ್ಯೆಗಳನ್ನು ಬಗೆಹರಿಸೋಣ ಬನ್ನಿ ಎಂದಿದ್ದರು ಸುಮಲತ ಅವರು. ಹಾಗಾದರೆ ಈಗ ಬನ್ನಿ ಸಮಸ್ಯೆ ಬಗೆಹರಿಸೋಣ.. ನೀವು ಮುಂದೆ ನಡೆದರೆ ನಾವೆಲ್ಲಾ ನಿಮ್ಮ ಹಿಂದೆ ಬರ್ತೀವಿ ಎಂದು ಶಿವರಾಮೇಗೌಡ ಅವರು ಸಂದೇಶ ನೀಡಿದ್ದಾರೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here