ಕಳೆದ ಮೂರು ನಾಲ್ಕು ದಿನಗಳಿಂದ ಫೋನ್ ಕದ್ದಾಲಿಕೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.ಇದೀಗ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಹೆಸರು ಬಂದಿದ್ದು ಬೆಂಗಳೂರು ಅಪರಾಧಗಳ ತನಿಖೆಗಾಗಿ ಇರುವ ಸಿಸಿಬಿ ಯ ತಾಂತ್ರಿಕ ವಿಭಾಗದಲ್ಲಿ ನಡೆದಿದೆ ಎನ್ನಲಾಗಿರುವ ಫೋನ್‌ ಕದ್ದಾಲಿಕೆ ಪ್ರಕರಣ ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಗೊಳಿಸುತ್ತಿದೆ. ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮತ್ತು ಜೋಡೆತ್ತು ಖ್ಯಾತಿಯ ನಟರಾದ ದರ್ಶನ್‌ ಹಾಗೂ ಯಶ್‌ ಫೋನ್‌ಗಳನ್ನೂ ಕದ್ದಾಲಿಸಲಾಗಿತ್ತು ಎನ್ನಲಾಗುತ್ತಿದೆ.ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿ ಆಗಿದ್ದರಿಂದ ಈ ಕ್ಷೇತ್ರ ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು. ನಿಖಿಲ್‌ಗೆ ಪ್ರತಿಸ್ಫರ್ಧಿಯಾಗಿದ್ದ ಸುಮಲತಾ ಅಂಬರೀಷ್‌ ಪರವಾಗಿ ದರ್ಶನ್‌ ಮತ್ತು ಯಶ್‌ ಜೋಡಿ ಕಣಕ್ಕೆ ಇಳಿದಿತ್ತು.

ಈ ಸಂದರ್ಭದಲ್ಲಿ ಇವರಿಬ್ಬರ ಫೋನ್‌ ಕರೆ ಸೇರಿ ಮೂರು ತಿಂಗಳ ಅವಧಿಯಲ್ಲಿ ಸುಮಾರು 900 ನಂಬರುಗಳ ಸಂಭಾಷಣೆಯನ್ನು ಕದ್ದಾಲಿಸಲಾಗಿದೆ ಎನ್ನಲಾಗುತ್ತಿದೆ. ಆಶ್ಚರ್ಯಕರ ಸಂಗತಿ ಎಂದರೆ ಕಳೆದ ಸರಕಾರದಲ್ಲಿ ಸೂಪರ್‌ ಸಿಂ ಎಂದು ಕರೆಸಿಕೊಂಡಿದ್ದ ಹೆಚ್‌.ಡಿ.ರೇವಣ್ಣ ಅವರ ನಂಬರನ್ನೂ ಕದ್ದಾಲಿಸಲಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಜತೆಗೆ ಮಂಡ್ಯದ ಇಂಡ್ವಾಳ್‌ ಸಚ್ಚಿದಾನಂದ ಹಾಗೂ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಮೊಬೈಲ್‌ ನಂಬರ್‌ಗಳೂ ಕದ್ದಾಲಿಕೆಗೆ ಒಳಗಾಗಿದ್ದವು ಎನ್ನಲಾಗುತ್ತಿದೆ. ಆದರೆ ತನಿಖೆ ಹಂತದಲ್ಲಿದೆ ಎಂಬ ಕಾರಣಕ್ಕೆ ಯಾವ ಅಧಿಕಾರಿಯೂ ಈ ಬಗ್ಗೆ ಖಚಿತವಾಗಿ ಹೇಳುತ್ತಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here