ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರ ಜನ್ಮದಿನದ ಸಂಭ್ರಮ. ಈ ಬಾರಿ ದರ್ಶನ್ ನಿವಾಸಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ. ಜನ್ಮದಿನದ ಸಂಭ್ರಮದಲ್ಲಿರುವ ದರ್ಶನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ಪ್ರತಿವರ್ಷದಂತೆ ಈ ವರ್ಷವೂ ಹುಟ್ಟುಹಬ್ಬ ಇದೆ. ಅಭಿಮಾನಿಗಳು ಬರ್ತಿದ್ದಾರೆ, ಬಂದಿದ್ದಾರೆ. ಮೊಲ, ಬಾತು ಕೋಳಿ ಗಿಫ್ಟ್ ತಂದಿದ್ದಾರೆ ಅವನ್ನೆಲ್ಲ ಫಾರ್ಮ್​ಹೌಸ್ ಗೆ ಕಳಿಸಿಕೊಡ್ತಿನಿ ಎಂದು ದರ್ಶನ್​ ಹೇಳಿದರು.ಕಳೆ ಬಾರಿಯಂತೆ ಈ ಬಾರಿಯೂ ಕೇಕ್ ಇಲ್ಲ. ಎಲ್ಲ ನೀಟಾಗಿದೆ. ಇವರು ಕೊಡುವ ದವಸ ಧಾನ್ಯಗಳು ಸಾಕಷ್ಟು ಜನರಿಗೆ ಉಪಯೋಗ ಆಗ್ತಿದೆ. ಅಭಿಮಾನಿಗಳು ಕೊಟ್ಟ ಈ ದಾನ ಮನೆ ತುಂಬುತ್ತಿದೆ.ಅನಾಥಶ್ರಮ ಒಂದರಲ್ಲಿ ಮಕ್ಕಳು ಸ್ವೀಟ್ ಕೇಳ್ತಿದ್ರಂತೆ.

ಅವರಿಗೆ ಸಕ್ಕರೆ ಕೊಟ್ಟಿದ್ದಾರೆ. ಇದರಿಂದ ಒಂದು ದಿನ ಅಲ್ಲ, ಮೂರು ದಿನ‌ ಸ್ವೀಟ್ ಮಾಡ್ತಾರೆ. ರಾಬರ್ಟ್ ಟೀಸರ್​ನಲ್ಲಿ ನೀವು ಈಗ ನೋಡಿರೋದು 10% ಮಾತ್ರ. ಇನ್ನು ಸಿನಿಮಾ ಬಾಕಿ ಇದೆ. ರಾಜವೀರ ಮದಕರಿ ಶೂಟಿಂಗ್ ಶುರುವಾಗಿದೆ ಮುಂದೆ ಹೇಳ್ತಿನಿ ಎಂದರು.ಹುಟ್ಡಿದ ದಿನವಾದರೂ ಇಂದು ಕೆಲಸ ಮಾಡದೇ ಇರೋದಿಲ್ಲ ನಟ ದರ್ಶನ್​. ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಸ್ವಲ್ಪ ಹೊತ್ತಿನ ನಂತರ ರಾಬರ್ಟ್ ಡಬ್ಬಿಂಗ್ ಹೋಗಿ ಬರ್ತಿನಿ ಎಂದು ಹೇಳಿದರು.

ಲಯನ್ಸ್ ಕ್ಲಬ್ ಸಹಯೋಗದಲ್ಲಿ ದರ್ಶನ್​ ಅಭಿಮಾನಿಗಳು, ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ನಟನ ನೋಡಲು ಬರುವ ದೂರದ ಊರಿನಿಂದ ಬರೋ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದ ಅಭಿಮಾನಿಗಳು ಹಸುವನ್ನು ಉಡುಗೊರೆಯಾಗಿ ನೀಡಿದರು. ಇನ್ನು ಒಬ್ಬ ಅಭಿಮಾನಿ 5 ಲೀಟರ್​ ಅಡುಗೆ ಎಣ್ಣೆಯನ್ನು ಉಡುಗೊರೆಯಾಗಿ ಕೊಟ್ಟರು.ಆ್ಯಂಬುಲೆನ್ಸ್​ನಲ್ಲಿಯೇ ದರ್ಶನ್ ಮನೆ ಬಳಿ ಬಂದ ಅಭಿಮಾನಿ. ಕುರುಬರಹಳ್ಳಿಯ ಶ್ರೀನಿವಾಸ್ ಎಂಬ ಅಭಿಮಾನಿಗೆ ಎರಡೂ ಕಿಡ್ನಿ ಫೇಲ್ ಆಗಿವೆ. ಯುವಕನ ತಂದೆಯೇ ಈಗ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಇವತ್ತು ಅಥವಾ ನಾಳೆ ಆಪರೇಷನ್ ನಡೆಯಲಿದೆ. ನಟ ದರ್ಶನ್​ ಭೇಟಿ ಸಾಧ್ಯವಾಗದೇ ವಾಪಸ್​ ತೆರಳಿದ ಶ್ರೀನಿವಾಸ್​. ಅಭಿಮಾನಿಯ ವಿವರ ಪಡೆದಿರುವ ದರ್ಶನ್ ನಂತರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here