ಮಂಡ್ಯದಲ್ಲಿ ಸದ್ಯ ಕಳೆದ ಹತ್ತು ದಿನಗಳಿಂದ ದರ್ಶನ್ ಮೇನಿಯಾ ಆರಂಭವಾಗಿದೆ. ಹೌದು ಡಿ ಬಾಸ್ ಕಾಲಿಟ್ಟ ಕಡೆಯಲ್ಲೆಲ್ಲಾ ಜನಸಾಗರವೇ ಹರಿದು ಬರುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅಮ್ಮ ರವರ ಪರವಾಗಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ನಟ ದರ್ಶನ್ ಅವರನ್ನು ನೋಡಲು ಬಾರಿ ಜನಸಾಗರವೇ ನೆರದಿದೆ. ಕೆ.ಆರ್ ಪೇಟೆಯಲ್ಲಿ ದರ್ಶನ್ ನೋಡಲು ಸೇರಿದ್ದ ಜನಸಾಗರ ಕಂಡು ಸ್ವತಃ ದರ್ಶನ್ ಕೂಡ ಆಶ್ಚರ್ಯಗೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೆ ಆರ್ ಪೇಟೆ ಗೆ ಆಗಮಿಸುವ ಸುದ್ದಿ ಮೊದಲೇ ತಿಳಿದಿದ್ದ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಗಾಗಿ ವಿಶೇಷ ಹಾರವನ್ನು ಸಿದ್ದಪಡಿಸಿದ್ದರು.

ತಮ್ಮ ಊರಿಗೆ ಮೆಚ್ಚಿನ ಡಿ ಬಾಸ್ ಆಗಮನವಾಗುತ್ತಿದ್ದಂತೇ ಊರಿಗೆ ಊರೇ ಡಿ‌ ಬಾಸ್ ನೋಡಿ ಸಂಭ್ರಮ ಪಟ್ಟು ಜೈಕಾರ ಕೂಗಿದರು. ಇನ್ನು ಕೆ.ಆರ್ ಪೇಟೆ ಚುನಾವಣಾ ಪ್ರಚಾರದ ನಂತರ ಸೋಮನಹಳ್ಳಿ ಗ್ರಾಮದಲ್ಲಿ ಪ್ರೀತಿಯ ಜನರ ಅದ್ದೂರಿ ಸ್ವಾಗತದ ಜೊತೆಗೆ ರೈತನಾಗಿ ಹಾಲು ಕರೆಯುವ ಮೂಲಕ ಪಕ್ಕ ರೈತ ಎಂದು ಸಾಭೀತು ಮಾಡಿದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನಾಡಿದ್ದು ಸದ್ಯ ದರ್ಶನ್ ಹಾಲು ಕರೆಯುತ್ತಿರುವ ಈ ವೀಡಿಯೋ ಸಕ್ಕತ್ ವೈರಾಲ್ ಆಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಲು ಕರೆದಿರುವ ವೀಡಿಯೋ ನೋಡಿದ ಸುಮಲತಾ ಅಂಬರೀಶ್ ಅವರು ತಮ್ಮ ಸೋಷಿಯಲ್ ಮೀಡಿಯಾದ ಪೇಜ್ ನಲ್ಲಿ  ಸಖತ್ ಸಂಭ್ರಮದಿಂದಲೇ ಪೋಸ್ಟ್ ಮಾಡಿದ್ದಾರೆ. ಮಗನೇ ದರ್ಶನ್ ! ನೀನು ಈ

ಕಾರಣಕ್ಕೆ ಇಷ್ಟ ಎಂದು ಫೇಸ್​ಬುಕ್​ನಲ್ಲಿ ಸುಮಲತಾ ಅಂಬರೀಶ್ ವಿಡಿಯೋ ಪೊಸ್ಟ್​ ಹಾಕಿದ್ದಾರೆ. ಇಂದು ದರ್ಶನ್, ಸುಮಲತಾ ಅಂಬರೀಶ್​ ಪರ ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅದೇ ಗ್ರಾಮದ ಕುಮಾರ್ ಎಂಬ ರೈತರ ಹಸುವಿನಿಂದ ಹಾಲು‌ ಕರೆದಿದ್ದಾರೆ. ಈ ಬಗ್ಗೆ ಸುದ್ದಿ ಹರಡಿದ ನಂತರ ವಿಷಯ ತಿಳಿದ ಸುಮಲತಾ, ದರ್ಶನ್ ಕೆಲಸ ಮೆಚ್ಚಿಕೊಂಡಾಡಿದ್ದಾರೆ. ಇನ್ನು ಈ ಕುರಿತು ಫೇಸ್​ಬುಕ್​ನಲ್ಲಿ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here