ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ತಮ್ಮ ಅಭಿಮಾನಿಗಳಿಗೆ ಡಿ ಬಾಸ್ ಆಗೇ ಕಾಣುತ್ತಾರೆ. ನೋಡಲು ಅವರು ಪಕ್ಕಾ ಮಾಸ್ ಹೀರೋ ತರ ಕಾಣಿಸಿದರೂ ಅವರೊಳಗೊಬ್ಬ ಭಾವನಾತ್ಮಕ ವ್ಯಕ್ತಿ ಕೂಡಾ ಇದ್ದಾನೆ ಎಂಬುದು ಕೂಡಾ ಅಷ್ಟೇ ನಿಜ. ದರ್ಶನ್ ಅವರು ಮಾದ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ವಿಷಯ ಒಂದನ್ನು ಮಾತನಾಡುತ್ತಾ ಭಾವುಕರಾಗಿದ್ದಾರೆ. ದರ್ಶನ್ ಅವರ ಒಡೆಯಾ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮಾದ್ಯಮಗಳ ಮುಂದೆ ಸಂದರ್ಶನವೊಂದಕ್ಕೆ ಹಾಜರಾಗಿದ್ದರು.

ಸಂದರ್ಶನದ ವೇಳೆ ಅವರನ್ನು, ನಿಮ್ಮನ್ನು ನಿಮ್ಮ ಅಭಿಮಾನಿಗಳು ಡಿ ಬಾಸ್, ದಚ್ಚು , ದಾಸ ಹಾಗೂ ಇನ್ನಿತರೆ ಹೆಸರುಗಳಿಂದ ಕರೆಯುವರು, ನಿಮಗೆ ಅಭಿಮಾನಿಗಳು ಏನೆಂದು ಕರೆದರೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳಿದಾಗ ದರ್ಶನ್ ಅವರ ಉತ್ತರ ನಿಜಕ್ಕೂ ಅನಿರೀಕ್ಷಿತ ಎನಿಸುವಂತೆ ಇತ್ತು. ಏಕೆಂದರೆ ದರ್ಶನ್ ಅವರು ನನ್ನ ಅಭಿಮಾನಿಗಳು ನನ್ನನ್ನು ಲೇ ಎಂದು ಕರೆದರೂ ಕೂಡಾ ನಾನು ತಿರುಗಿ ನೋಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳ ಬಗ್ಗೆ ತನಗಿರುವ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ನನ್ನ ತಲೆಯ ಮೇಲೆ ಯಾವಾಗಲೂ ಒಂದು ಕೈ ಇತ್ತು. ನಾನು ತಪ್ಪು ದಾರಿಗೆ ಹೋದಾಗ ಆ ಕೈ ನನ್ನನ್ನು ಸರಿ ದಾರಿಗೆ ತರುತ್ತಿತ್ತು. ಆದರೆ ಇಂದು ಆ ಕೈ ಇಲ್ಲ ಎಂದು ಅಂಬರೀಶ್ ಅವರ ಸ್ಮರಣೆ ಮಾಡಿದ ದರ್ಶನ್ ಒಂದು ಭಾವುಕರಾದರು. ದರ್ಶನ್ ಅವರಿಗೆ ಅಂಬರೀಶ್ ಅವರ ಬಗ್ಗೆ ಇದ್ದ ಗೌರವ, ಅವರ ಕುಟುಂಬದೊಡನೆ ದರ್ಶನ್ ಅವರು ಮಗನಂತೆ ನಡೆಸು ಒಡನಾಟ ಎಲ್ಲರಿಗೂ ತಿಳಿದಿದೆ‌. ಅಂಬರೀಶ್ ಅವರು ಎಲ್ಲರನ್ನು ಬಿಟ್ಟು ಹೋದ ಮೇಲೂ ಕೂಡಾ ದರ್ಶನ್ ಮಗನಂತೆ ಅಂಬರೀಶ್ ಅವರ ಕುಟುಂಬದೊಡನೆ ಸದಾ ನಿಂತಿರುವುದು ಕೂಡಾ ಎಲ್ಲರ ಮೆಚ್ಚುಗೆ ಗಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here