ಗಂಡುಗಲಿ ಮದಕರಿ ನಾಯಕ ಸಿನಿಮಾ ಚಿತ್ರೀಕರಣ ಆರಂಭವಾಗುವ ಮುನ್ನವೇ ಅಬ್ಬರಿಸುತ್ತಿದೆ. ಮೊನ್ನೆಯಷ್ಟೇ ಮುಹೂರ್ತ ಮುಗಿಸಿದೆ ಈ ಸಿನಿಮಾ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ನ ನಂತರ ಮತ್ತೊಂದು ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಲು ಸಿದ್ಧರಾಗಿದ್ದಾರೆ. ಸಿನಿಮಾ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಸಿನಿಮಾ ಬಗ್ಗೆ ಹೊಸ ವಿಷಯಗಳು ಹೊರಬಂದಿವೆ. ಈ ಚಿತ್ರ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಮಾಡಬೇಕಿದ್ದ, ಬಹಳ ಹಿಂದೆಯೇ ತೆರೆ ಕಾಣಬೇಕಿದ್ದ ಸಿನಿಮಾ‌. ಆದರೆ ಆಗ ಕಾಲ ಕೂಡಿ ಬರದ ಕಾರಣ ತಡವಾಗಿದ್ದು, ಈಗ ಸಮಯ ಕೂಡಿ ಬಂದಿದೆ, ನಟ ದರ್ಶನ್ ಅವರು ಮದಕರಿ ನಾಯಕನಾಗುತ್ತಿದ್ದಾರೆ.

ಗಂಡುಗಲಿ ಮದಕರಿ ನಾಯಕ ಸಿನಿಮಾವನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು, ಅವರ ಬಹು ದಿನದ ಕನಸು ನನಸಾಗುತ್ತಿದೆ. ರಾಜೇಂದ್ರ ಸಿಂಗ್ ಬಾಬು ಅವರೇ ಹೇಳುವಂತೆ ಈ ಸಿನಿಮಾಕ್ಕಾಗಿ ಅವರು ಸುಮಾರು ಒಂದೂವರೆ ವರ್ಷ ಸ್ಕ್ರಿಪ್ಟ್ ರೆಡಿ ಮಾಡಿದ್ದರಂತೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಅನೇಕ ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿತ್ತು. ಆದರೆ ಸಿನಿಮಾಕ್ಕೆ ಎದುರಾದ ದೊಡ್ಡ ಸಮಸ್ಯೆ ಅದರ ಬಜೆಟ್. ಆ ಕಾಲಕ್ಕೆ ಈ ಸಿನಿಮಾ ನಿರ್ಮಾಣಕ್ಕೆ ತಗುಲುವ ವೆಚ್ಚ ಸುಮಾರು 25 ರಿಂದ 30 ಕೋಟಿ. ಈ ಮೊತ್ತ ಆ ಕಾಲಕ್ಕೆ ದೊಡ್ಡ ಬಜೆಟ್ ಆದ್ದರಿಂದ ಸಿನಿಮಾ ನಿಂತು ಹೋಗಿತ್ತು.

ಆದರೆ ಈಗ ಸಿನಿಮಾ ನಿರ್ಮಾಣ ಆರಂಭವಾಗಿದ್ದು, ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ದರ್ಶನ್ ನಾಯಕರಾಗಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರ ಕನಸು ನನಸಾಗುವ ಕಾಲ ಬಂದಾಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಬೇಕಿದ್ದ ಸಿನಿಮಾ, ಈಗ ಚಾಲೆಂಜಿಂಗ್ ಸ್ಟಾರ್ ಅವರ ಕೈ ಸೇರಿದೆ. ಒಟ್ಟಾರೆ ಒಂದು ಅದ್ಬುತವಾದ, ಅದ್ದೂರಿ ಐತಿಹಾಸಿಕ ಸಿನಿಮಾ ಸಿದ್ಧವಾಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಸುನಾಮಿ ಎಬ್ಬಿಸಲು ಗಂಡುಗಲಿ ಮದಕರಿ ನಾಯಕ ಸಜ್ಜಾಗುತ್ತಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here