ಸ್ಯಾಂಡಲ್ ವುಡ್ ನ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಇಂದು ವಿಧಿ ವಶರಾಗಿದ್ದಾರೆ. ಅವರು ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತಿದ್ದರು. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆಯು ಯಶಸ್ವಿಯಾಗದ ಕಾರಣ ಬುಲೆಟ್ ಪ್ರಕಾಶ್ ಅವರು ಸಾವನ್ನಪ್ಪಿದ್ದಾರೆ. ಅವರ ಸಾವಿನ ಸುದ್ದಿಯನ್ನು ಕೇಳಿದ ಕೂಡಲೇ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಬುಲೆಟ್ ಪ್ರಕಾಶ್ ಅವರ ಕುಟುಂಬದ ಕಷ್ಟಗಳಿಗೆ ಸ್ಪಂದಿಸುವುದಾಗಿ ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ.

ದರ್ಶನ್ ಅವರು ಬುಲೆಟ್ ಪ್ರಕಾಶ್ ಈಗ ನನ್ನ ಗೆಳೆಯನೋ ಅಲ್ವೋ ಆದರೆ ಆತ ಒಂದು ಕಾಲದಲ್ಲಿ ನನಗೆ ಗೆಳೆಯ. ಆತನ ಮಗಳ ಮದುವೆಯ ಜವಾಬ್ದಾರಿ ನನ್ನದು ಎಂದು ಅವರು ಭರವಸೆಯನ್ನು ನೀಡಿದ್ದಾರೆ. ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಅವರು ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ದರ್ಶನ್ ಅವರ ಸಿನೆಮಾಗಳಲ್ಲಿ ಬುಲೆಟ್ ಪ್ರಕಾಶ್ ಅವರು ಸ್ನೇಹಿತನ ಪಾತ್ರದಲ್ಲಿ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಜನರನ್ನು ರಂಜಿಸಿದ್ದರು. ಈಗ ತನ್ನ ಗೆಳೆಯ ಹಾಗೂ ಸಹ ನಟನ ಕುಟುಂಬಕ್ಕೆ ನೆರವಾಗಿ ನಿಂತಿದ್ದಾರೆ ನಟ ದರ್ಶನ್ ಅವರು.

ಬುಲೆಟ್ ಪ್ರಕಾಶ್ ಅವರು ಹಾಸ್ಯ ನಟನಾಗಿ ಸಾಕಷ್ಟು ಹೆಸರು ಮಾಡಿದ ನಟನಾದರೂ, ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕಿರಲಿಲ್ಲ. ಅಲ್ಲದೇ ಅವರು ದೇಹದ ತೂಕ ಇಳಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಹಾಗೂ ಆ ಚಿಕಿತ್ಸೆಯ ಮೂಲಕ ಸುಮಾರು 35 ಕೆಜಿಗಳಷ್ಟು ತೂಕವನ್ನು ಅವರು ಇಳಿಸಿಕೊಂಡಿದ್ದರು,ಆದರೆ ಅದೇ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎನ್ನುವ ಸಂದೇಹ ಕೂಡಾ ಹುಟ್ಟಿದೆ. ಏನೇ ಆದರೂ ಪ್ರಸ್ತುತ ಅಗಲಿದ ನಟನ ಕುಟುಂಬದ ನೆರವಿಗೆ ನಟ ದರ್ಶನ್ ಅವರು ಮುಂದೆ ಬಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ…..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here