ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆ ಈಗ ರಾಜ್ಯದ ಕೇಂದ್ರ ಬಿಂದು ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡಲು ಇಂದು ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ‌. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕೆ.ಆರ್‌.ಎಸ್‌ಗೆ ಆಗಮಿಸಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ ನಡೆಸಿದರು.ದರ್ಶನ್ ಆಗಮಿಸುತ್ತಿದ್ದಂತೆ ‘ಡಿ ಬಾಸ್ ಡಿ ಬಾಸ್’ ಎಂದು ಅಭಿಮಾನಿಗಳು ಜೈಕಾರ ಕೂಗಿದರು.

ದಿವಂಗತ ಅಂಬರೀಷ್ ಅವರ ಭಾವ ಚಿತ್ರಕ್ಕೆ ದರ್ಶನ್ ಪುಷ್ಪಾರ್ಚನೆ ಸಲ್ಲಿಸಿದರು.ದರ್ಶನ್ ನೋಡಲು ಸಾವಿರಾರು ಜನ ಭಾಗಿಯಾಗಿದ್ದರು. ನೂಕು ನುಗ್ಗಲು ಉಂಟಾಗುತ್ತಿದ್ದಂತೆ ಜನರನ್ನು ಚದುರಿಸಲು ಪೊಲೀಸರ ಲಾಠಿ ಪ್ರಹಾರ ನಡೆಸಿದರು.ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರು ಮಾತನಾಡಿಕೊಳ್ಳಲಿ..ಆದರೆ ಏಪ್ರಿಲ್ 18ರಂದು ನಡೆಯುವ ಚುನಾವಣೆ ಅವರ ಮಾತಿಗೆ ಉತ್ತರವಾಗಲಿ ಎಂದು ಅಭಿಮಾನಿಗಳೆದುರು ದರ್ಶನ್ ನುಡಿದರು.

‘ಅಂಬರೀಷ್‌ಗೆ ಅಧಿಕಾರದ ದಾಹ ಇಲ್ಲ. ಕಾವೇರಿ ವಿಚಾರಕ್ಕೆ ಅಧಿಕಾರ ತ್ಯಾಗ ಮಾಡಿದರು. ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿ ಅಂಬರೀಷ್‌ಗೆ ಗೌರವ ಸಲ್ಲಿಸಿ’ ಎಂದು ದರ್ಶನ್ ಕರೆ ನೀಡಿದರು.
ಕಹಳೆ  ಹಿಡಿದಿರುವ  ರೈತನ  ಗುರುತಿಗೆ ಕ್ರಮ ಸಂಖ್ಯೆ 20 ಸುಮಲತಾಗೆ ಮತ ಹಾಕಿ ಎಂದು ದರ್ಶನ್ ಮನವಿ ಮಾಡಿದರು. ಕಹಳೆ ಊದುತ್ತಿರುವ ರೈತ ಸುಮಲತಾ ಅವರ ಚುನಾವಣೆ ಚಿಹ್ನೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here