ಮಂಡ್ಯ ಚುನಾವಣೆಯ ಬಿಸಿ ಬೇಸಿಗೆಯ ಬಿಸಿಗೆ ಸಡ್ಡು ಹೊಡೆಯುವಂತಿದೆ. ನಟರಾದ ದರ್ಶನ್ ಹಾಗೂ ಯಶ್ ಅವರು ಸುಮಲತ ಅವರ ಬೆಂಬಲಕ್ಕೆ ನಿಂತ ಮೇಲೆ, ಕಳೆದ ಶನಿವಾರ ಮುಂಜಾನೆ ದರ್ಶನ್ ಅವರ ಮನೆಯ ಮೇಲೆ ಹಾಗೂ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ಹೊಡೆದ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಈಗ ಅದರ ಕುರಿತಾಗಿ ಮಾನ್ಯ ಮುಖ್ಯಮಂತ್ರಿ ಯವರಾದ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ದರ್ಶನ್ ಅವರು ಸಿನಿಮಾದಲ್ಲಿ ಡ್ರಾಮಾ ಮಾಡಿದ ಹಾಗೆ ಮಾಡಿದರೆ ಬಹಳ ದಿನ ಉಳಿಯೋಲ್ಲ ಎಂದು ಟೀಕಿಸುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿಯವರು ಆದಿಚುಂಚನಗಿರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ಸಂದರ್ಭದಲ್ಲಿ ಅವರು ಚಾಲೆಂಜಿಂಗ್ ಸ್ಟಾರ್ ಅಂತಾರಲ್ಲ ಆ ನಟ ದರ್ಶನ್ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಅಂತ ಹೇಳ್ತಾ ಇದ್ದಾರೆ, ಆದರೆ ಯಾರಾದರು ಮೂರು ಗಂಟೆ ಸಮಯದಲ್ಲಿ ಕಲ್ಲು ತೂರುತ್ತಾರಾ? ಹೋಗಲಿ ಅದಾದ ಮೇಲೆ ಘಟನೆ ನಡೆದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫೂಟೇಜ್ ಸೀಜ್ ಮಾಡಲು ಹೇಳಿದ್ದೆ. ಆದರೆ ಸಿಸಿಟಿವಿ ಆಫ್ ಆಗಿತ್ತಂತೆ. ಹಾಗಾದರೆ ಅದನ್ನು ಆಫ್ ಮಾಡಿದ್ದು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ಮಾತು ಮುಂದುವರೆಸಿದ ಅವರು ಒಬ್ಬ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಷ್ಟು ಜನ ಒಂದಾಗಿದ್ದಾರೆ ಎನ್ನುವುದು ನಮಗೆಲ್ಲಾ ಗೊತ್ತಾಗಿದೆ. ಇದು ಜನರಿಗೆ ಯಾಕೆ ಅರ್ಥ ಆಗಲ್ಲ, ಮಂಡ್ಯ ಜಿಲ್ಲೆ ಜನತೆ ನಮ್ಮ ಜೊತೆಗಿದ್ದಾರೆ. ಹಣ ಕೊಟ್ಟು ಕೊಂಡುಕೊಳ್ಳುವವರಿಗೆ ದುಡ್ಡು ಯಾವ ಮೂಲದಿಂದ ಬರುತ್ತಿದೆ. ಅದು ಪಾಪದ ಹಣ. ಆ ಹಣದಿಂದ ಚುನಾವಣೆ ನಡೆಸಲು ಹೊರಟಿದ್ದಾರೆ. ಆದರೆ ಅಂತಹ ಪಾಪದ ಹಣಕ್ಕೆ ಮಂಡ್ಯ ಜಿಲ್ಲೆಯ ಜನ ಅಷ್ಟು ಸುಲಭವಾಗಿ ಮರಳಾಗುವುದಿಲ್ಲ ಎಂದು ಅವರು ಪ್ರತಿಸ್ಪರ್ಧಿಗಳನ್ನು ಟೀಕೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here