ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಚಿತ್ರದ ಮಹೂರ್ತ ಸಮಾರಂಭ ನಡೆದಿದೆ. ಇಂದು ಬೆಳಿಗ್ಗೆ ಸರಳವಾಗಿ ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಗರದ ಚಂದ್ರಲೇಔಟ್ ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಪೂಜೆ ಮಾಡಿ ಮುಹೂರ್ತ ಆಚರಿಸಿದೆ ಚಿತ್ರತಂಡ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಮುಗಿದ ನಂತರ ದರ್ಶನ್ ಅಭಿನಯದ 51 ನೇ ಚಿತ್ರ ಯಾವುದು ಎಂಬ ಗೊಂದಲಗಳಿಗೆ ತೆರೆ ಬಿದ್ದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಚಿತ್ರಕ್ಕೆ ರಷ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲುಕ್ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸುದೀಪ್ ಅಭಿನಯದ ವಿಷ್ಣುವರ್ಧನ ಮತ್ತು ಶರಣ್ ಅಭಿನಯದ ಜಯಲಲಿತಾ ಚಿತ್ರ ನಿರ್ದೇಶಿಸಿದ ಪಿ.ಕುಮಾರ್ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ.ಭರ್ಜರಿ ಸಿನಿಮಾಗೆ ಕ್ಯಾಮೆರಾಮಾನ್ ಆಗಿದ್ದ ಶ್ರೀಷಾ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆಯಾಗಿದ್ದಾರೆ ಇನ್ನು ಈ ಚಿತ್ರವನ್ನು ದರ್ಶನ್ ಅವರಿಗೆ ಆಪ್ತರಾದ ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದಾರೆ.ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here