ಚಿತ್ರ :- ಒಡೆಯ 

ತಾರಾಗಣ :- ಚಾಲೆಂಜಿಂಗ್ ಸ್ಟಾರ್ ದರ್ಶನ್ , ಸನಾ ತಿಮ್ಮಯ್ಯ, ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಪಂಕಜ್, ನಿರಂಜರ್, ಸಮರ್ಥ್ ಮತ್ತು ಯಶಸ್ ಮುಂತಾದವರು. 

ಸಂಗೀತ :- ಅರ್ಜುನ್ ಜನ್ಯ 

ನಿರ್ಮಾಪಕರು :- ಸಂದೇಶ್ ನಾಗರಾಜ್ 

ನಿರ್ದೇಶನ :- ಎಂ ಡಿ ಶ್ರೀಧರ್ 

ಸುದ್ದಿಮನೆ ರೇಟಿಂಗ್ 4/5

ಚಾಲೆಂಜಿಂಗ್ ಸ್ಟಾರ್ ದರ್ಶನ್   ಮತ್ತು  ನಿರ್ದೇಶಕ ಎಂ.ಡಿ.ಶ್ರೀಧರ್  ಅವರ ಕಾಂಬಿನೇಷನ್ ನಲ್ಲಿ ಬುಲ್ ಬುಲ್ ಚಿತ್ರದ ನಂತರ ಮೂಡಿ ಬಂದಿರುವ ಸಿನಿಮಾ ಒಡೆಯ‌. ಈ ಸಿನಿಮಾ ನಿರ್ಮಾಪಕರು ಸಂದೇಶ್ ನಾಗರಾಜ್ ಅವರಾಗಿದ್ದು, ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡಗಿನ ಅಂದಗಾತಿ ಸನಾ ತಿಮ್ಮಯ್ಯ ಅವರು ನಾಯಕಿಯಾಗಿ ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ. ಟೀಸರ್ ಬಿಡುಗಡೆ ನಂತರ ಸಖತ್ ಸದ್ದು ಮಾಡಿದ್ದ ದರ್ಶನ್ ಅವರ ಒಡೆಯ ಸಿನಿಮಾ ಬಿಡುಗಡೆಯಾಗಿ ಜನರ ಮನಸ್ಸನ್ನು ಗೆಲ್ಲುತ್ತಾ ಮುನ್ನುಗಿದ್ದು, ಒಡೆಯ ಎಲ್ಲೆಡೆ ಅಬ್ಬರಿಸುತ್ತಿದ್ದಾನೆ‌‌.

ಒಡೆಯ ಸಾಹಸ ಪ್ರಧಾನವಾದ ಚಿತ್ರವಾಗಿದ್ದರೂ ಅದರ ಜೊತೆಗೆ ಭಾವನಾತ್ಮಕವಾದ ಅಂಶಗಳನ್ನು ಕೂಡಾ ಹೊಂದಿದೆ. ಜೀವನ ಪೂರ್ತಿ ಮದುವೆಯಾಗದೆ ಉಳಿಯುವ ನಿರ್ಧಾರ ಮಾಡಿದ ನಾಯಕ ಗಜೇಂದ್ರ, ತನ್ನ ತಮ್ಮಂದಿರ ಜೊತೆ ಸೇರಿ ಊರಿನ ಜನರ ಬೇಕು ಬೇಡ ಗಳನ್ನು ಗಮನಿಸುತ್ತಾ, ಜನಾದರಣೆ ಪಡೆದು ಒಡೆಯನಂತೆ ಇರುತ್ತಾನೆ. ಹೀಗೆ ಬ್ಯಾಚುಲರ್ ಆಗಿ ಉಳಿಯಬೇಕೆಂದು ಬಯಸುವ ನಾಯಕನ ಜೀವನದಲ್ಲೂ ಕೂಡಾ ಪ್ರೇಮ ಗೀತೆಯನ್ನು ಹಾಡಲು ಬರುವಳು ನಾಯಕಿ. ಹೀಗೆ ಸಾಗುವ ಕಥಾನಕದಲ್ಲಿ ನಾಯಕಿ , ನಾಯಕನನ್ನು ತನ್ನ ಕುಟುಂಬವನ್ನು ಪರಿಚಯಿಸಲು ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಏನಾಗುತ್ತದೆ? ನಾಯಕ ಮದುವೆಯಾಗುತ್ತದೆಯೇ? ಇದೆಲ್ಲಾ ಚಿತ್ರದ ಕಥಾವಸ್ತು.

ಚಿತ್ರದ ಕಥೆಗೆ ತಕ್ಕಂತೆ ಇಂಪಾದ ಸಂಗೀತವನ್ನು ನೀಡಿದ್ದಾರೆ ಅರ್ಜುನ್ ಜನ್ಯಾ ಅವರು. ಅವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೇಳಲು ಸದಾ ಖುಷಿಯನ್ನು ನೀಡಿದ್ದಾರೆ. ಸಾಹಸ ದೃಶ್ಯಗಳಂತೂ ಅದ್ಬುತ ವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್ , ರವಿಶಂಕರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದರ್ಶನ್ ಅವರ ತಮ್ಮಂದಿರಾಗಿ ಪಂಕಜ್, ನಿರಂಜರ್, ಸಮರ್ಥ್ ಮತ್ತು ಯಶಸ್ ಅವರು ನಟಿಸಿದ್ದು, ಚಿತ್ರದಲ್ಲಿ ಹಾಸ್ಯ ನಟರಾದ ಸಾಧು ಕೋಕಿಲಾ, ಚಿಕ್ಕಣ್ಣ ಕೂಡಾ ನಟಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಒಡೆಯ ಯಶಸ್ಸು ಪಡೆದುಕೊಂಡಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here