ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.  ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಕಾಂಗ್ರೆಸ್​ನಿಂದ ಟಿಕೇಟ್ ಸಿಗಲಿ, ಬಿಡಲಿ ಮಂಡ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಟಿ ಸುಮಲತಾ ಅಂಬರೀಶ್​ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಈ ಮಧ್ಯೆ ಸುಮಲತಾ ಅವರ ಪರ ಪ್ರಚಾರಕ್ಕೆ ತಾರೆಯರ ದಂಡು ತಯಾರಾಗುತ್ತಿದೆ.ದತ್ತು ಪುತ್ರ ಎಂದೇ ಕರೆಯಲಾಗುತ್ತಿರುವ ನಟ ದರ್ಶನ್ ಈಗಾಗಲೇ ಅಮ್ಮನ ಜತೆ ನಿಲ್ಲುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ.

ಈ ಬಗ್ಗೆ  ಮಾಧ್ಯಮಗಳ ಜೊತೆ  ಮಾತನಾಡಿದ ಅವರು ಸುಮಲತಾ ಅಮ್ಮನ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.ಅಂಬಿ ಮಾಮ ಕುಟುಂಬ ಬೇರೆಯಲ್ಲ. ನಮ್ಮ ಕುಟುಂಬ ಬೇರೆ ಅಲ್ಲ. ಸುಮಲತಾ ಅಮ್ಮ ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೂ ನಾನು ಬದ್ಧನಾಗಿದ್ದೇನೆ. ಒಟ್ಟಾರೆ ನಾನು ಸುಮಲತಾ ಅಮ್ಮನ ಪರ ನಿಲ್ಲುತ್ತೇನೆ ಎಂದು ಘೋಷಣೆ ಕೂಗಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ಸಹ ಸುಮಲತಾ ಅಂಬರೀಶ್ ಅವರ ಜೊತೆ ನಿಲ್ಲುವುದು ಖಚಿತವಾಗಿದೆ. ನಿಖಿಲ್ ಕುಮಾರಸ್ವಾಮಿ ಸಹ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಸ್ಟಾರ್ ಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಸುದೀಪ್ , ಯಶ್ , ದರ್ಶನ್ ನಿಖಿಲ್ ಕುಮಾರಸ್ವಾಮಿ ಅವರಿಗೆ ಆತ್ಮೀಯರೇ ಆಗಿದ್ದಾರೆ ಎನ್ನುವದುಸಹ ಸತ್ಯ. ಈಗ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕೆಲ ಸ್ಟಾರ್ ಗಳಿಗೆ ಬಿಸಿ ತುಪ್ಪವಾಗಿದೆ‌..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here