ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಚಿತ್ರ ರಾಬರ್ಟ್ ನ ಮುಹೂರ್ತ ನೆರವೇರಿದ್ದು, ಚಿತ್ರತಂಡ ಬನಶಂಕರಿ ದೇವಿಗೆ ಚಿತ್ರದ ಯಶಸ್ಸನ್ನು ಕೋರಿ ವಿಶೇಷ ಪೂಜೆ ಸಲ್ಲಿಸಿದೆ. ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ, ನಟ ದರ್ಶನ್ ಸೇರಿ ಚಿತ್ರತಂಡದ ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಪೂಜಾ ವಿಧಿಯ ಬಳಿಕ ಚಿತ್ರಕ್ಕೆ ಕ್ಲಾಪ್ ಮಾಡಲಾಯಿತು. ಈ ಸಂದರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ನಟ ದರ್ಶನ್ ಅವರು ಇಂದಿನಿಂದಲೇ ಶೂಟಿಂಗ್ ಶುರುವಾಗಿದೆ. ಈ ಚಿತ್ರದ ಮೂಲಕ ಒಂದು ಹೊಸದನ್ನು ಮಾಡಲು ಹೊರಟಿದ್ದೇವೆ ಎಂದಿದ್ದಾರೆ. ಇದೇ ಮೊದಲ ಬಾರಿ ಫೋಟೋಶೂಟ್ ಮಾಡಲು ಹೊರಟಿದ್ದಾರೆ‌‌ ನಟ ದರ್ಶನ್.

ಪೋಟೋ ಶೂಟ್ ಬಗ್ಗೆ ಹೇಳಿದ ಅವರು, ಚಿತ್ರದ ಮೊದಲ‌ ಸ್ಟಿಲ್ ಗಾಗಿ ಎಲ್ಲರೂ ಬಹಳ ಕಾತುರದಿಂದ ಕಾಯ್ತಾ ಇದ್ದಾರೆ. ಆದಷ್ಟು ಬೇಗ ಸ್ಟಿಲ್ ಬರುತ್ತೆ ಎಂದು ಭರವಸೆ ನೀಡಿದ್ದಾರೆ. ಸಿನಿಮಾಗೆ ತಾವು ಹೇಗೆ ತಯಾರಿ ನಡೆಸಿರುವುದು ಎಂಬುದಕ್ಕೆ ಅವರು ಹಾಸ್ಯ ಮಿಶ್ರಿತ ಧ್ವನಿಯಲ್ಲಿ ತಯಾರಿ ಏನಿಲ್ಲ, ನಿರ್ದೇಶಕ ತರುಣ್ ಹೇಗೆ ಹೇಳಿದರೆ ಹಾಗೆ ಕೇಳೋದಷ್ಟೆ ಎಂದು ಹೇಳುತ್ತಾ, ಇವತ್ತಿಂದ ರೈಸ್ ತಿನ್ನಬಾರದು ಎಂದು ಹೇಳಿದ್ದು, ನಮ್ಮ ಊಟಾನ ಕಿತ್ಕೊಂಡಿದ್ದಾರೆ ಎಂದು ನಿರ್ದೇಶಕರ ಬಗ್ಗೆ ದರ್ಶನ್ ಅವರು ಹಾಸ್ಯ ಮಾಡಿದ್ದಾರೆ.

ಮಾದ್ಯಮಗಳಲ್ಲಿ ಈ ಚಿತ್ರಕ್ಕೆ ಬಾಲಿವುಡ್ ನಿಂದ ಐಶ್ವರ್ಯ ರೈ ಬರುತ್ತಾರೆ ಎಂದು ಬಂದಿದ್ದ ಸುದ್ದಿಗೆ ಪ್ರತಿಕ್ರಿಯೆ ನೀಡಿ ದರ್ಶನ್ ಅವರು ಅದೆಲ್ಲಾ ನಿಜ ಅಲ್ಲ, ಕೇವಲ ಸುಳ್ಳು ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಇನ್ನು ಈಗಾಗಲೇ ಚಿತ್ರದ ಪೋಸ್ಟರ್ ನೂರು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಅದರಲ್ಲಿ ಹನುಮಾನ್ ಚಿತ್ರವಿರುವುದರಿಂದ , ಪೋಸ್ಟರ್ ನಲ್ಲಿ ಹನುಮಂತ, ಹೆಸರಿನಲ್ಲಿ ರಾಬರ್ಟ್ ಇದೆ ಎಂದು ಕೇಳಿದ ಪ್ರಶ್ನೆಗೆ ದರ್ಶನ್ ಬಹಳ ಬುದ್ಧಿವಂತಿಕೆಯ ಉತ್ತರ ನೀಡಿ, ಚಿತ್ರದ ಗುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here