ನಟ ದರ್ಶನ್ ಹಾಗೂ ಯಶ್ ಅವರು ಸುಮಲತ ಅವರಿಗೆ ಅವರ ಚುನಾವಣೆಯ ಸ್ಪರ್ಧೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿರುವ ವಿಷಯ ಈಗ ಜಗಜ್ಜಾಹಿರವಾಗಿದೆ. ಇದರ ಬೆನ್ನಲ್ಲೇ ಇಂದು ಸುಮಲತ ಅವರು ನಾಮ ಪತ್ರ ಸಲ್ಲಿಸಲು ಹೋದಾಗಲೂ ಅವರ ಜೊತೆಗಿದ್ದ ಈ ಇಬ್ಬರೂ ನಟರು ನಾಮ ಪತ್ರ ಸಲ್ಲಿಕೆ ನಂತರ ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಆ ಸಂದರ್ಭದಲ್ಲಿ ದರ್ಶನ್ ಅವರು ಮಾತನಾಡುತ್ತಾ ನಮ್ಮ ಬಗ್ಗೆ ಯಾರು ಏನೇ ಮಾತನಾಡಿದರೂ ನಾವು ನೊಂದುಕೊಳ್ಳುವುದಿಲ್ಲ, ಬೇಜಾರಂತೂ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ಬಹಳ ನೇರವಾಗಿ ತಮ್ಮ ಮಾತುಗಳನ್ನು ಹೇಳಿದ್ದಾರೆ.

ದರ್ಶನ್ ಅವರು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ನಡೆದಂತಹ ಸಮಾವೇಶದಲ್ಲಿ ಮಾತನಾಡುತ್ತಾ ನಾವು ಸುಮಲತ ಅಮ್ಮನಿಗಾಗಿ ಇಲ್ಲಿಗೆ ಬಂದಿರುವುದು ನಿಮ್ಮ ಪ್ರೀತಿಯ ಆಶೀರ್ವಾದ ಎಂದು ಹೇಳಿದ್ದಾರೆ. ಅಲ್ಲದೆ ಅವರು ನಾವು ದೇಹದ ರಕ್ತದಿಂದ ಅಲ್ಲಿನ ಜನರ ಕಾಲ್ತೊಳೆದರೂ ಅದು ಕಡಿಮೆ ಎನ್ನುತ್ತಾ, ಇಲ್ಲಿ ನೆರೆದಿರುವ ಜನ ದುಡ್ಡು ಕೊಟ್ಟರೆ ಬಂದವರಲ್ಲ ಬದಲಾಗಿ ಅಂಬರೀಶ್ ಅವರ ಮೇಲಿಟ್ಟಿರುವ ಪ್ರೀತಿಯಿಂದ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ನಿಮ್ಮ ಸೌಂಡ್ ಚುನಾವಣೆ ಮುಗಿಯುವವರೆಗೆ ಹೀಗೇ ಇರಬೇಕೆಂದು ಹೇಳಿರುವ ಅವರು , ಸುಮಲತ ಅವರು ಬಂದಿರುವುದು ಜನರ ಪ್ರೀತಿಗಾಗಿ. ಟೀಕಿಸುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ನಡೆಸಿದ ಸಮಾವೇಶದಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೈಯಲ್ಲಿರೋ ರಕ್ತದಲ್ಲಿ ನಿಮ್ಮ ಕಾಲು ತೊಳಿದ್ರು ಕಮ್ಮೀನೇ. ನಾವು ಕಾಸು ಕೊಟ್ಟು ಜನ ತಂದಿಲ್ಲ. ಅಂಬರೀಶ್ ಅಭಿಮಾನದ ಮೇಲೆ ಜನ ಬಂದಿದ್ದಾರೆ ಎಂದು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here