ನಟ ದರ್ಶನ್ ಮತ್ತು ಅವರ ಪತ್ನಿ ನಡುವೆ ಇತ್ತೀಚಿಗೆ ಮತ್ತೊಂದು ಗಲಾಟೆಯಾಗಿದೆ ಎಂಬ ಸುದ್ದಿ ಬಹಳಷ್ಟು ಸುದ್ದಿಯಾಗಿತ್ತು. ಈ ವಿಷಯಕ್ಕೆ ಮತ್ತಷ್ಟು ಪ್ರಾಮುಖ್ಯತೆ ಬಂದಿರುವುದು ಪತ್ರಕರ್ತ ರವಿ ಬೆಳಗೆರೆ ಅವರು ತಮ್ಮ ಯೂ ಟ್ಯೂನ್ ಚಾನಲ್ ನಲ್ಲಿ ವಿಡಿಯೋ ಒಂದನ್ನು ಹಾಕಿ, ಅದರಲ್ಲಿ ಸವಿವರವಾಗಿ ದರ್ಶನ್ ಅವರು ಪತ್ನಿಯನ್ನು ಹೊಡೆದ ವಿಷಯ, ಅವರ ಜಗಳಕ್ಕೆ ಕಾರಣ, ದರ್ಶನ್ ಅವರ ಜೀವನದಲ್ಲಿರುವ ಇನ್ನೊಬ್ಬ ಹೆಣ್ಣಿನ ಹೆಸರು ಹೀಗೆ ಹಲವು ವಿಷಯಗಳನ್ನು ಕುರಿತಾಗಿ ಅವರು ಅದರಲ್ಲಿ ಚರ್ಚೆ ನಡೆಸಿದ್ದರು‌.

ಅಂಬರೀಶ್ ಅವರ ಒಂಬತ್ತನೇ ತಿಂಗಳ ಪುಣ್ಯ ತಿಥಿಯ ಸಂದರ್ಭದಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲು ಬಂದಿದ್ದು ಸುಮಲತ ಅವರನ್ನು ಈ ವಿಷಯವನ್ನಾಗಿ ಅಂದರೆ ದರ್ಶನ್ ಹಾಗೂ ಅವರ ಪತ್ನಿಯ ನಡುವಿನ ಜಗಳದ ವಿಷಯವಾಗಿ ಪ್ರಶ್ನೆ ಮಾಡಲಾಹಿದೆ. ಏಕೆಂದರೆ ಸದ್ಯಕ್ಕೆ ದರ್ಶನ್ ಮತ್ತು ಅವರ ಪತ್ನಿಯ ನಡುವೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು, ಅವರಿಬ್ಬರ ನಡುವೆ ಸಂಧಾನ ಮಾಡಲು ಪ್ರಯತ್ನಿಸುತ್ತಿರುವವರು ಸಂಸದೆ ಸುಮಲತ ಅವರು ಎನ್ನಲಾಗಿದೆ. ಆದ್ದರಿಂದ ಅವರನ್ನು ಈ ವಿಷಯ ಕುರಿತಾಗಿ ಪ್ರಶ್ನೆ ಮಾಡಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತ ಅವರು ಇಂತಹ ಸುದ್ದಿಗಳು ಬರುವುದು ಸಹಜ, ನಾನು ಬೆಳಗೆರೆ ಅವರ ವಿಡಿಯೋವನ್ನು ನೋಡಿಲ್ಲ ಮತ್ತು ಇಂತಹ ಸುದ್ದಿಗಳಿಗೆ ನಾನು ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದ ಅವರು, ಕೆಲವರು ಇಂತಹ ಸುದ್ದಿ ದೊರೆತರೆ ತಮಗೆ ಬೇಕಾದ ರೀತಿಯಲ್ಲಿ ಬಳಸಿ, ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ, ಸಂಸಾರದ ನಡುವೆ ಇಂತಹ ಕಲಹ ಗಳನ್ನು ಸೃಷ್ಟಿ ಮಾಡುವುದು ತಪ್ಪು, ಅಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಅವರು ಉತ್ತರ ನೀಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here